ಪುತ್ತೂರು: ಶ್ರೀ. ಕ್ಷೇ.ಧ.ಗ್ರಾ.ಯೋಜನೆ ಮತ್ತು ಜ್ಞಾನದೀಪ ವತಿಯಿಂದ ಬೆಂಚ್ ಡೆಸ್ಕ್ ವಿತರಣೆ ಯೋಜನೆಯಡಿಯಲ್ಲಿ ಸಾಜ ಶಾಲೆಗೆ 6 ಜೊತೆ ಬೆಂಚ್ ಡೆಸ್ಕ್ ಅನ್ನು ಮೇಲ್ವಿಚಾರಕರಾದ ಪ್ರಶಾಂತ್ ವಿತರಣೆ ಮಾಡಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸುಧಾಕರ ನಾಯಕ್ ಹಸಂತಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಲ್ನಾಡು ಗ್ರಾ.ಪಂ. ಸದಸ್ಯರಾದ ವಸಂತಿ ಹರೀಶ್ ಸಾಜ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ವಿಮಲ ಚರಣ್, ಸಾರ್ಯ ಒಕ್ಕೂಟದ ಅಧ್ಯಕ್ಷ ಭಾಸ್ಕರ ಕೂಟೇಲು, ವಲಯ ಮೇಲ್ವಿಚಾರಕ ಪ್ರಶಾಂತ್ ನೆಲ್ಯಾಡಿ, ಬಲ್ನಾಡು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಇದ್ದಿಕುಂಞಿ ಹಾಜಿ, ಸಾಜ ಒಕ್ಕೂಟದ ಸೇವಾ ಪ್ರತಿನಿಧಿ ಉಷಾ ಸಹಿತ ಹಲವರು ಉಪಸ್ಥಿತರಿದ್ದರು.
ಮುಖ್ಯಶಿಕ್ಷಕ ಶಶಿಕಾಂತ್ ಪ್ರಸ್ತಾವನೆಗೈದು ಸ್ವಾಗತಿಸಿದರು, ಸಹಶಿಕ್ಷಕ ಕೃಷ್ಣ ಕೂಟೇಲು ವಂದಿಸಿದರು. ಸಹ ಶಿಕ್ಷಕಿ ಸುವರ್ಣಲತಾ ಕಾರ್ಯಕ್ರಮ ನಿರ್ವಹಿಸಿದರು.
ಸಹ ಶಿಕ್ಷಕರಾದ ಕವಿತಾ ಮತ್ತು ಉಷಾ ಸಹಕರಿಸಿದರು.