ಪ್ರಾಯೋಗಿಕ ಕೃಷಿ ಅಧ್ಯಯನ, ಪರಿಸರ ಸಂರಕ್ಷಣೆ ಮಾಹಿತಿ

ಪುತ್ತೂರು: ಮರ್ಕಝುಲ್ ಹುದಾ ಪದವಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕ ವತಿಯಿಂದ ಅಂತಿಮ ಡಿಗ್ರಿ ವಿದ್ಯಾರ್ಥಿನಿಯರಿಗೆ ಪ್ರಾಯೋಗಿಕ ಕೃಷಿ ಅಧ್ಯಯನ ಕಾರ್ಯಕ್ರಮ ನರಿಮೊಗರು ಕೈಪಂಗಳಗುತ್ತು ಗದ್ದೆಯಲ್ಲಿ ನಡೆಯಿತು. “ನೇಜಿ ಅನ್ನದಾತನ ಹಾದಿಯತ್ತ ಒಂದು ಹೆಜ್ಜೆ….ಅಪೂರ್ವ ಅನುಭವ” ಎಂಬ ಧ್ಯೇಯ ವಾಕ್ಯದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ನೇಜಿ ನೆಡುವ ಸಂಪ್ರದಾಯ, ಕ್ರಮ, ನೇಜಿ ಬಗ್ಗೆ ತರಗತಿ, ಕೃಷಿ ಪರಿಸರ ಸಂರಕ್ಷಣೆ ಮಾಹಿತಿ, ಕೆಸರಿನಲ್ಲಿ ಓಟ, ಪರಿಸರ ಸೊಬಗಿನ ಆಸ್ವಾಧನೆ ಮುಂತಾದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.
ಕಾರ್ಯಕ್ರಮ ನಡೆಸಲು ಸಹಕಾರ ನೀಡಿದ ಪ್ರಗತಿಪರ ಕೃಷಿಕರಾದ ಜಯರಾಮ ಜೈನ್ ಕೈಪಂಗಳಗುತ್ತು, ನರಿಮೊಗರು ಸಿ.ಎ ಬ್ಯಾಂಕ್ ನಿರ್ದೇಶಕ ಜಯರಾಮ ಪೂಜಾರಿ, ಪ್ರಗತಿಪರ ಕೃಷಿಕರು, ಅವಿಭಜಿತ ದ.ಕ ಜಿಲ್ಲಾ ಕಂಬಳ ಸಂರಕ್ಷಣೆ ನಿರ್ವಹಣಾ ತರಬೇತು ಅಕಾಡೆಮಿಯ ನಿರ್ದೇಶಕ ಉಮೇಶ್ ಕರ್ಕೆರ ಕೈಪಂಗಳ, ನರಿಮೊಗರು ಗ್ರಾ.ಪಂ ಮಾಜಿ ಅಧ್ಯಕ್ಷ ಸುಭಾಶ್ ಶೆಣೈ ಮೊದಲಾದವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮರ್ಕಝುಲ್ ಹುದಾ ಕಾಲೇಜಿನ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಡಿಗ್ರಿ ವಿಭಾಗದ ಪ್ರಾಂಶುಪಾಲ ಮುಹಮ್ಮದ್ ಮನ್ಸೂರ್ ಕಡಬ, ರಾಷ್ಟ್ರೀಯ ಸೇವಾ ಯೋಜನಾ ಘಟಕ ಇದರ ಮರ್ಕಝ್ ಕ್ಯಾಂಪಸ್ ಯೊಜನಾಧಿಕಾರಿಗಳಾದ ರೇಷ್ಮಾ ಮತ್ತು ಶಹನಾಜ್ ಉಪಸ್ಥಿತರಿದ್ದರು.