ಪುತ್ತೂರು: ಸ್ನೇಹ ಸಂಗಮ ಆಟೋ ಚಾಲಕರ ಮಾಲಕರ ಸಂಘ ಪುತ್ತೂರು ಇದರ ವತಿಯಿಂದ ಸಂಘದ ಗೌರವಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಹಾಗೂ ಕಾನೂನು ಸಲಹೆಗಾರರಾದ ಹರಿಣಾಕ್ಷಿ ಜೆ. ಶೆಟ್ಟಿ ನೆಲ್ಲಿಕಟ್ಟೆ ಇವರ ಮಾರ್ಗದರ್ಶನದಲ್ಲಿ ಸುಳ್ಯಪದವು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಸುಳ್ಯಪದವು ಘಟಕದ ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಸುಳ್ಯಪದವು, ಕಾರ್ಯದರ್ಶಿಯಾಗಿ ಪುಷ್ಪರಾಜ್ ಸುಳ್ಯಪದವು ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳನ್ನು ಪುತ್ತೂರು ತಾಲೂಕು ಸಂಘದ ಅಧ್ಯಕ್ಷ ತಾರಾನಾಥ ಗೌಡ, ಕೋಶಾಧಿಕಾರಿ ಸಿಲ್ವೇಸ್ಟರ್ ಡಿಸೋಜರವರು ಹೂಗುಚ್ಛ ನೀಡಿ ಅಭಿನಂದಿಸಿದರು.
ಪುತ್ತೂರು ತಾಲೂಕು ಸಂಘದ ಅಧ್ಯಕ್ಷ ತಾರಾನಾಥ ಗೌಡ ಬನ್ನೂರು, ಸಂಚಾಲಕರಾದ ಅರವಿಂದ್ ಪೆರಿಗೇರಿ, ಪ್ರಧಾನ ಕಾರ್ಯದರ್ಶಿ ಹರೀಶ್ ಕುಮಾರ್ ತೆಂಕಿಲ, ಕೋಶಾಧಿಕಾರಿ ಸಿಲ್ವೇ ಸ್ಟಾರ್ ಡಿಸೋಜಾ ಹಾಗೂ ಸದಸ್ಯರಾದ ರಾಧಾಕೃಷ್ಣ ಉಪಸ್ಥಿತರಿದ್ದರು. ಜೊತೆಗೆ ಸಂಘಟನೆಯ ಕಾರ್ಯ ವೈಖರಿಗಳ ಬಗ್ಗೆ ಚರ್ಚಿಸಿ ನಮ್ಮ ಸಂಘದ ಸದಸ್ಯರಿಗೆ ತುರ್ತು ಚಿಕಿತ್ಸೆ ವೆಚ್ಚವೆಂಬತೆ 5,೦೦೦ರೂ.ಗಳನ್ನು ಪರಿಹಾರ ನೀಡುವುದರ ಬಗ್ಗೆ ಘಟಕಕ್ಕೆ ತಿಳುಹಿಸಲಾಯಿತು.