ಪುತ್ತೂರು: ಕಲ್ಲಾರೆ ಶ್ರೀಕೃಷ್ಣ ಲಂಚ್ ಹೋಮ್ ಬಳಿ ಕಂಪೌಂಡ್ ಕುಸಿದು ತೆರೆದ ಸ್ಥಿತಿಯಲ್ಲಿ ಗೋಚರಿಸುತ್ತಾ ಪಾದಚಾರಿಗಳಿಗೆ, ವಾಹನ ಸವಾರರಿಗೆ ಅಪಾಯ ತಂದೊಡ್ಡುವ ಸ್ಥಿತಿ ನಿರ್ಮಾಣವಾಗಿದೆ.
ಖಾಸಗಿ ಒಡೆತನಕ್ಕೆ ಸೇರಿದ ಜಾಗದ ಕಂಪೌಂಡ್ ಸುಮಾರು ಏಳು ವರ್ಷದ ಹಿಂದೆಯೇ ಕುಸಿದು ಬಿದ್ದಿತ್ತು ಎನ್ನಲಾಗಿದೆ. ಆದರೆ ಸದ್ರಿ ಸ್ಥಳದಲ್ಲಿ ದೊಡ್ಡದಾದ ಪೊದೆಯೊಂದು ಕಂಪೌಂಡು ಸುತ್ತಲೂ ಆವರಿಸಿದ್ದ ಕಾರಣ ಕಂಪೌಂಡ್ ಕುಸಿದ ಚಿತ್ರಣ ಕಾಣ ಸಿಗುತ್ತಿರಲಿಲ್ಲ. ಇದೀಗ ಖಾಸಗಿ ಒಡೆತನದವರು ಪೊದೆಯನ್ನು ಸ್ವಚ್ಚಗೊಳಿಸಿದ ಕಾರಣ ಕಂಪೌಂಡ್ ತೆರೆದ ಸ್ಥಿತಿಯಲ್ಲಿ ಕಾಣುತ್ತಿದೆ.
ಈ ಕಂಪೌಂಡ್ ಸುಮಾರು ಹತ್ತಿಪ್ಪತ್ತು ಫೀಟ್ ಆಳದ ಗುಂಡಿಯಾಗಿದ್ದು, ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ಅಪಾಯ ತಂದೊಡ್ಡುವ ಸ್ಥಿತಿ ಎದುರಾಗಿದೆ. ಸಂಬಂಧಪಟ್ಟ ಇಲಾಖೆ ಈ ಕುರಿತು ಎಚ್ಚೆತ್ತು ಸಂಭಾವ್ಯ ಅಪಾಯ ತಪ್ಪಿಸಬೇಕಾಗಿ ನಾಗರಿಕರು ಆಗ್ರಹಿಸಿದ್ದಾರೆ.