ನಿಡ್ಪಳ್ಳಿ; ಶ್ರೀ ಕಿನ್ನಿಮಾಣಿ ಪೂಮಾಣಿ ಪರಿವಾರ ದೈವಸ್ಥಾನ ಶ್ರೀ ಕ್ಷೇತ್ರ ನಿಡ್ಪಳ್ಳಿ ಇದರ ವರ್ಷಾವಧಿ ಜಾತ್ರೋತ್ಸವ ಕಾರ್ಯಕ್ರಮ ಜ.19 ರಿಂದ 24 ರವರೆಗೆ ನಿಡ್ಪಳ್ಳಿ ಶ್ರೀ ಉಳ್ಳಾಕುಲು ಮಾಡದಲ್ಲಿ ಬ್ರಹ್ಮಶ್ರೀ ದೇಲಂಪಾಡಿ ಗಣೇಶ್ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
ಜ.19 ರಂದು ರಾತ್ರಿ ಗಂಟೆ 10 ರ ನಂತರ ಗುತ್ತುಚಾವಡಿಯಿಂದ ಪಿಲಿಭೂತ ಹಾಗೂ ಮಲರಾಯ ದೈವಗಳ ಭಂಡಾರ ಉಳ್ಳಾಕುಲು ಮಾಡಕ್ಕೆ ತೆರಳುವುದು.ರಾತ್ರಿ ಗಂಟೆ 8 ರಿಂದ ಅನ್ನಸಂತರ್ಪಣೆ ನಡೆಯಲಿದೆ.
ಜ. 20 ರಂದು ಪ್ರಾತಃಕಾಲ ಉಳ್ಳಾಕುಲು ಮಾಡದಲ್ಲಿ ಮಕರ ತೋರಣ ಏರಿಸುವುದು ಮತ್ತು ಧ್ವಜಾರೋಹಣ ಆಗಿ ತಂಬಿಲಗಳು.ಸಂಜೆ ಗಂಟೆ 6 ರಿಂದ ತೋರಣ ಒಪ್ಪಿಸುವುದು ನಂತರ ದೈವಗಳಿಗೆ ತಂಬಿಲಗಳು ನಡೆಯಲಿದೆ.
ಜ.21 ರಂದು ಬೆಳಿಗ್ಗೆ ಗಂಟೆ 9 ರಿಂದ ಕಿನ್ನಿಮಾಣಿ ದೈವಗಳ ನೇಮೋತ್ಸವ, ಮಧ್ಯಾಹ್ನ ಪ್ರಸಾದ ವಿತರಣೆ, ನಂತರ ಅನ್ನಸಂತರ್ಪಣೆ. ಸಂಜೆ ಗಂಟೆ 6 ರಿಂದ ತೋರಣ ಒಪ್ಪಿಸುವುದು ನಂತರ ದೈವಗಳಿಗೆ ತಂಬಿಲ ನಡೆಯಲಿದೆ.
ಜ.22 ರಂದು ಬೆಳಿಗ್ಗೆ ಗಂಟೆ 9 ರಿಂದ ಪೂಮಾಣಿ ದೈವಗಳ ನೇಮೋತ್ಸವ, ಮಧ್ಯಾಹ್ನ ಪ್ರಸಾದ ವಿತರಣೆ ಅನ್ನಸಂತರ್ಪಣೆ, ರಾತ್ರಿ ಗಂಟೆ 8 ಕ್ಕೆ ದೇರ್ಲ ಮನೆಯಿಂದ ಧೂಮಾವತಿ ದೈವದ ಭಂಡಾರ ಬರುವುದು,ರಾತ್ರಿ ಗಂಟೆ 9 ರಿಂದ ಪಿಲಿಭೂತ ದೈವದ ನೇಮೋತ್ಸವ ಪ್ರಸಾದ ವಿತರಣೆ ನಡೆಯಲಿದೆ.
ಜ.23 ರಂದು ಪ್ರಾತಃಕಾಲ ಗಂಟೆ 2 ರಿಂದ ಧೂಮಾವತಿ ದೈವದ ನೆಮೋತ್ಸವ ಪ್ರಸಾದ ವಿತರಣೆ,ಬೆಳಿಗ್ಗೆ ಗಂಟೆ 9 ರಿಂದ ಮಲರಾಯ ದೈವದ ನೇಮೋತ್ಸವ, ಮಧ್ಯಾಹ್ನ ಪ್ರಸಾದ ವಿತರಣೆ ಅನ್ನಸಂತರ್ಪಣೆ, ರಾತ್ರಿ ಆನಾಜೆ ಎಂಬಲ್ಲಿ ಉಳ್ಳಾಕುಲು ದೈವಗಳ ಅವಭೃತಸ್ನಾನ ಹಾಗೂ ನಾಗನಕಟ್ಟೆಯಲ್ಲಿ ನಾಗತಂಬಿಲ ಮತ್ತು ದೈವಗಳಿಗೆ ತಂಬಿಲ,ಬಳಿಕ ಉಪಹಾರ ನಡೆಯಲಿದೆ.
ಜ.24ರಂದು ಪ್ರಾತಃಕಾಲ ಗಂಟೆ 4 ಕ್ಕೆ ಧ್ವಜಾರೋಹಣ, ಬೆಳಿಗ್ಗೆ ಗಂಟೆ 8ಕ್ಕೆ ಕಾನ ತರವಾಡು ಮನೆಯಿಂದ ಇಷ್ಟದೇವತೆಯ ಭಂಡಾರ ಮತ್ತು ಪಳಂಬೆ ಮನೆಯಿಂದ ರುದ್ರಾಂಡಿ ದೈವದ ಭಂಡಾರ ಬರುವುದು. ಬೆಳಿಗ್ಗೆ ಗಂಟೆ 10 ರಿಂದ ಇಷ್ಟದೇವತೆಯ ನೇಮೋತ್ಸವ ಪ್ರಸಾದ ವಿತರಣೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದು ಅನುವಂಶಿಕ ಆಡಳಿತ ಮೊಕ್ತೇಸರ ಪ್ರವೀಣ್ ಎನ್, ಅರಿಗ ನಿಡ್ಪಳ್ಳಿ ಗುತ್ತು ಹಾಗೂ ಗ್ರಾಮದ 12 ಬಾರಿಕೆ ಮನೆಯವರು ತಿಳಿಸಿದ್ದಾರೆ.