ನಾಪತ್ತೆಯಾಗಿದ್ದ ನಾರಾಯಣ ರೈ ಸೂರಂಬೈಲು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

0

ಪುತ್ತೂರು:ಪಾಣಾಜೆ ಗ್ರಾಮದ ಸೂರಂಬೈಲು ನಿವಾಸಿ ನಾರಾಯಣ ರೈ(80ವ.)ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಪಾಣಾಜೆ-ಕೇರಳ ಗಡಿ ಭಾಗದ ಪೆರ್ಲ ಏತಡ್ಕ ಎಂಬಲ್ಲಿನ ಕಾಡೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಜ.17ರಂದು ನಾರಾಯಣ ರೈ ಅವರ ಪತ್ನಿ ಬೆಳಿಗ್ಗೆ ಎದ್ದೇಳುವ ಮೊದಲೇ, ಸರಿಸುಮಾರು ನಸುಕಿನ ಜಾವ 5 ಗಂಟೆಯಿಂದ ಮನೆಯಿಂದ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು.ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here