ಜ.26ರಂದು ಕುಂಬ್ರದಲ್ಲಿ ನಡೆಯುವ ಮಾನವ ಸರಪಳಿ ಯಶಸ್ವಿಗೊಳಿಸಿ: ಮಹಮ್ಮದ್ ಕೆ.ಎಚ್

0

ಪುತ್ತೂರು: ದೇಶದ ಗಣರಾಜ್ಯೋತ್ಸವ ದಿನದಂದು ರಾಷ್ಟ್ರ ರಕ್ಷಣೆಗೆ ಸೌಹಾರ್ದ ಸಂಕಲ್ಪ ಎಂಬ ಧ್ಯೇಯ ವಾಕ್ಯದೊಂದಿಗೆ ಎಸ್ಕೆಎಸ್ಸೆಸ್ಸೆಫ್ ನಡೆಸುತ್ತಿರುವ ಮಾನವ ಸರಪಳಿ ಕಾರ್ಯಕ್ರಮ ಕುಂಬ್ರ ಜಂಕ್ಷನ್ ಬಳಿಯ ಮೈದಾನದಲ್ಲಿ ಜ.26ರಂದು ನಡೆಯಲಿದೆ.

ಸಮಾರಂಭದಲ್ಲಿ ದ. ಕ. ಜಿಲ್ಲಾಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಬಂಬ್ರಾಣ ಉಸ್ತಾದ್, ಎಸ್ಕೆಎಸ್ಸೆಸ್ಸೆಫ್ ರಾಜ್ಯ ಪ್ರ.ಕಾರ್ಯದರ್ಶಿ ಮೌಲಾನಾ ಅನೀಸ್ ಕೌಸರಿ, ವಂದನೀಯ ರೇ|ಫಾದರ್ ಅಂಟನಿ ಪ್ರಕಾಶ್, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಖ್ಯಾತ ಚಿಂತಕರೂ, ವಾಗ್ಮಿಯೂ ಆದ ನಿಕೇತ್ ರಾಜ್ ಮೌರ್ಯ ಸಹಿತ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಪ್ರಮುಖರು ಬಾಗವಹಿಸಲಿದ್ದಾರೆ ಎಂದು ಮಾನವ ಸರಪಳಿ ಸ್ವಾಗತ ಸಮಿತಿ ಅಧ್ಯಕ್ಷ ಮಹಮ್ಮದ್ ಕೆ.ಎಚ್ ತಿಳಿಸಿದ್ದಾರೆ. ಆಕರ್ಷಣೀಯ ದಫ್, ಸ್ಕೌಟ್ ಗೈಡ್ ಒಳಗೊಂಡ ಕಾಲ್ನಡಿಗೆ ಪರ್ಪಂಜದ ಅಬ್ರೋಡ್ ಹಾಲ್ ಬಳಿಯಿಂದ ಕುಂಬ್ರ ತನಕ ಸಾಗಿ ಬರಲಿದೆ ಎಂದ ಅವರು ಶಿಸ್ತು ಬದ್ದ ಕಾರ್ಯಕ್ರಮದ ಯಶಸ್ವಿಗೆ ಎಲ್ಲಾ ಜಾತಿ, ಧರ್ಮದವರು ಸಹಕರಿಸಿ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ವಲಯಾದ್ಯಕ್ಷರಾದ ಮನ್ಸೂರ್ ಅಸ್ಲಮಿ, ವಲಯ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ , ಜಿಲ್ಲಾ ಸಂಘಟನಾ ಕಾರ್ಯದರ್ಶಿ ಯಾಸಿರ್ ಅರಾಫತ್ ಕೌಸರಿ, ವಲಯ ಸಂಘಟನಾ ಕಾರ್ಯದರ್ಶಿ ಇಬ್ರಾಹಿಂ ಹಾಜಿ ದರ್ಬೆ, ಮಾನವ ಸರಪಳಿ ಆರ್ಥಿಕ ಸಮಿತಿ ಚೆಯರ್ಮೇನ್ ಸಲಾಂ ಹಾಜಿ , ಮೀಡಿಯಾ ವಿಂಗ್ ಕನ್ವೀನರ್ ಲತೀಫ್ ಗುಂಡ್ಯಡ್ಕ, ಬಶೀರ್ ಗಟ್ಟಮನೆ, ಝೈನುದ್ದೀನ್ ಹಾಜಿ ರೆಂಜಲಾಡಿ, ಬಶೀರ್ ಕೌಡಿಚ್ಚಾರು, ಸಿ.ಎಂ.ಯ ಇಬ್ರಾಹಿಂ ಕೌಸರಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಸಿದ್ದೀಕ್ ಸುಲ್ತಾನ್ ಸ್ವಾಗತಿಸಿದರು. ಇಬ್ರಾಹಿಂ ಹಾಜಿ ವಂದಿಸಿದರು.

LEAVE A REPLY

Please enter your comment!
Please enter your name here