ಪುತ್ತೂರು: ಕರ್ನಾಟಕ ರಾಜ್ಯ ಡಾ ಗಂಗೂಬಾಯ್ ಹಾನಗಲ್ ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಜುಲೈ -ಆಗೋಸ್ಟ್ 2024ರಲ್ಲಿ ನಡೆದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ ಸಿ. ಸಾತ್ವಿಕ್ ನಾಯಕ್ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.
2014ನೇ ಸಾಲಿನ ಮಕ್ಕಳ ದಿನಾಚರಣೆಯ ‘ರಾಷ್ಟ್ರ ಪ್ರಶಸ್ತಿ’ ಪುರಸ್ಕೃತರಾಗಿರುವ ಸಿ. ಸಾತ್ವಿಕ್ ನಾಯಕ್ ಇವರು ಪ್ರಸ್ತುತ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ 10ನೇ ತರಗತಿಯ ವಿದ್ಯಾರ್ಥಿಯಾಗಿದ್ದಾರೆ.
ಶ್ರೀ ಶಾರದಾ ಹಿಂದುಸ್ಥಾನೀ ಸಂಗೀತ ವಿದ್ಯಾಲಯ ನೆಹರು ನಗರ ಪುತ್ತೂರು ಇಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡುತ್ತಿರುವ ಸಿ. ಸಾತ್ವಿಕ್ ನಾಯಕ್ ಇವರು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿರುವ ಪುತ್ತೂರು ಉಮೇಶ್ ನಾಯಕ್ ಹಾಗೂ ರೂಪಶ್ರೀ ನಾಯಕ್ ದಂಪತಿಯ ಪುತ್ರ.