ಬಡಗನ್ನೂರು: ಶ್ರೀ ಪೂಮಾಣಿ ಕಿನ್ನಿಮಾಣಿ (ಉಳ್ಳಾಕಲು) ಹಾಗೂ ರಾಜನ್ ದೈವಗಳ ದೈವಸ್ಥಾನ ಪಡುಮಲೆ ಇದರ ವಾರ್ಷಿಕ ನೇಮೋತ್ಸವ ಅಂಗವಾಗಿ ಜ.19 ರಂದು ಪಡುಮಲೆ ಪೇರಾಲು ಬೀಡು ಬುದ್ಧಿವಂತರ ಚಾವಡಿಯಲ್ಲಿ ರಾಜನ್ ದೈವದ ನೇಮ ನಡೆಯಿತು.
ಜ.19 ರಂದು ರಾತ್ರಿ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಶ್ರೀ ದೇವರಿಗೆ ವಿಶೇಷ ಕಾರ್ತಿಕ ಪೂಜೆ ನೆರವೇರಿಸಿ ಪ್ರಧಾನ ಅರ್ಚಕ ಮಹಾಲಿಂಗ ಭಟ್ ರವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಶ್ರೀ ಪೂಮಾಣಿ ಕಿನ್ನಿಮಾಣಿ (ಉಳ್ಳಾಕಲು) ಹಾಗೂ ರಾಜನ್ ದೈವಗಳ ದೈವಸ್ಥಾನದಿಂದ ಶ್ರೀ ದೈವಗಳಿಗೆ ತಂಬಿಲ ಸೇವೆ ನೆರವೇರಿಸಿ ಶ್ರೀ ದೈವದ ಭಂಡಾರವನ್ನು ಬೂಡು ಬುದ್ಧಿವಂತರ ಚಾವಡಿಗೆ ಬ್ಯಾಂಡ್ ವಾದ್ಯ ಘೋಷದೊಂದಿಗೆ ತಂದು ಜ.20 ರಂದು ಬೆಳಗ್ಗೆ ರಾಜನ್ ದೈವದ ನೇಮ ಪ್ರಸಾದ ವಿತರಣೆ ಬಳಿಕ ಪೊಟ್ಟ ದೈವಕ್ಕೆ ತಂಬಿಲ ಸೇವೆ ನಡೆಯುವ ಮೂಲಕ ಪಡುಮಲೆ ಜಾತ್ರೋತ್ಸವ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಬಲರಾಜ್ ಶೆಟ್ಟಿ ನಿಟ್ಟೆಗುತ್ತು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಮನೋಜ್ ರೈ ಪೇರಾಲು, ಶ್ರೀ ಪೂಮಾಣಿ ಕಿನ್ನಿಮಾಣಿ ಹಾಗೂ ರಾಜನ್ ದೈವಗಳ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಸದಸ್ಯರಾದ ವಿಶ್ವನಾಥ ಪೂಜಾರಿ ಪೂಜಾರಿಮೂಲೆ ರವಿರಾಜ ರೈ ಸಜಂಕಾಡಿ, ಅಸಿತ್ ರೈ ಕುದ್ರೆಮಜಲು, ಪದ್ಮನಾಭ ರೈ ಅರೆಪ್ಪಾಡಿ, ಪುರಂದರ ರೈ ಸೇನರಮಜಲು ಹಾಗೂ ಊರಿನವರು ಉಪಸ್ಥಿತರಿದ್ದರು.