ದರ್ಬೆತ್ತಡ್ಕ: ನೀರ್ಪಾಡಿ ರಸ್ತೆ ಬದಿಯಲ್ಲಿ ವಾರೀಸುದಾರರಿಲ್ಲದ ಎರಡು ಬೈಕ್ ಪತ್ತೆ..! ಬೈಕ್‌ಗಳನ್ನು ವಶಕ್ಕೆ ಪಡೆದ ಪೊಲೀಸರು

0

ಪುತ್ತೂರು: ದರ್ಬೆತ್ತಡ್ಕದ ನೀರ್ಪಾಡಿ ಬಸ್ಸು ತಂಗುದಾಣದ ಸಮೀಪ ರಸ್ತೆ ಬದಿಯಲ್ಲಿ ವಾರೀಸುದಾರರಿಲ್ಲದ ಎರಡು ಬೈಕ್‌ಗಳು ಕಂಡುಬಂದಿದ್ದು, ಈ ಎರಡು ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸ್ಥಳೀಯರು ಹೇಳುವ ಪ್ರಕಾರ ಈ ಎರಡು ಬೈಕ್‌ಗಳು ಜ.19 ರಂದು ಮಧ್ಯಾಹ್ನದಿಂದಲೇ ರಸ್ತೆ ಬದಿಯಲ್ಲಿ ಕಂಡು ಬಂದಿದ್ದವು. ಜ.20 ರಂದು ಕೂಡ ರಸ್ತೆ ಬದಿಯಲ್ಲಿಯೇ ಇರುವುದನ್ನು ಗಮನಿಸಿದ ಸ್ಥಳೀಯರು ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ರವರ ಗಮನಕ್ಕೆ ತಂದಿದ್ದರು. ತಕ್ಷಣವೇ ಅಧ್ಯಕ್ಷರು ಒಳಮೊಗ್ರು ಬೀಟ್ ಪೊಲೀಸ್ ಅಧಿಕಾರಿಯವರಿಗೆ ಈ ಬಗ್ಗೆ ಮಾಹಿತಿ ನೀಡಿ ಶಾಲಾ ವಿದ್ಯಾರ್ಥಿಗಳು, ಮಹಿಳೆಯರು ಓಡಾಡುವ ಪ್ರದೇಶ ಇದಾಗಿದ್ದು ತಕ್ಷಣವೇ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ತಿಳಿಸಿದ್ದರು. ಅದರಂತೆ ಸ್ಥಳಕ್ಕೆ ಆಗಮಿಸಿದ ಸಂಪ್ಯ ಠಾಣಾ ಬೀಟ್ ಪೊಲೀಸ್ ಅಧಿಕಾರಿ ಶರಣಪ್ಪ ಎಚ್.ಪಾಟೀಲ್‌ರವರು ಬೈಕ್‌ಗಳ ನಂಬರ್ ಪರಿಶೀಲನೆ ನಡೆಸಿ ದಾಖಲೆಯಲ್ಲಿರುವ ಮೊಬೈಲ್ ನಂಬರ್‌ಗೆ ಕರೆ ಮಾಡಿದ್ದಾರೆ. ಆದರೆ ಕರೆ ಸ್ವೀಕರಿಸದೆ ಇರುವುದರಿಂದ ಈ ಎರಡೂ ಬೈಕ್‌ಗಳನ್ನು ಸ್ಥಳೀಯರು ಸಹಕಾರ ಪಡೆದುಕೊಂಡು ಪಿಕಪ್ ನಲ್ಲಿ ಹಾಕಿಕೊಂಡು ಠಾಣೆಗೆ ತಂದಿದ್ದಾರೆ.


ಬೈಕ್‌ನಲ್ಲಿ ಕೀ ಕೂಡ ಇತ್ತು…!?
ಪುತ್ತೂರು ಆರ್‌ಟಿಓ ರಿಜಿಸ್ಟ್ರೇಷನ್ ಹೊಂದಿರುವ ಕೆ.ಎ 21ಇಸಿ3838 ಅಪಾಚ್ ಬೈಕ್ ಮತ್ತು ಕೆಎ21ಕ್ಯೂ8792 ಬೈಕ್ ಆಗಿದೆ. ಎರಡೂ ಬೈಕ್‌ನಲ್ಲಿ ಪೆಟ್ರೋಲ್ ಇದ್ದು ಅದರಲ್ಲೂ ಕೀ ಯನ್ನು ಕೂಡ ಬೈಕ್‌ನಲ್ಲಿಯೇ ಬಿಟ್ಟು ಯಾವ ಕಾರಣಕ್ಕಾಗಿ ಇಲ್ಲಿ ನಿಲ್ಲಿಸಿ ಹೋಗಿದ್ದಾರೆ ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ.

LEAVE A REPLY

Please enter your comment!
Please enter your name here