ಪುತ್ತೂರು: ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ವತಿಯಿಂದ ಸಂಸ್ಥೆಯ ಸಿಬ್ಬಂದಿಗಳಿಗೆ ಲೀಗ್ ಮಾದರಿಯ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಜ.19 ರಂದು ಪುತ್ತೂರು ತಾಲೂಕು ಕ್ರೀಡಾಂಗಣ ಕೊಂಬೆಟ್ಟು ಇಲ್ಲಿ ನಡೆಯಿತು.
ಸಂಸ್ಥೆಯ ಮುಖ್ಯಸ್ಥ ಬಲರಾಮ ಆಚಾರ್ಯ ಹಾಗೂ ರಾಜಿ ಬಲರಾಮ ಆಚಾರ್ಯ ದೀಪ ಪ್ರಜ್ವಲನೆಗೊಳಿಸುವ ಮೂಲಕ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಿದರು.
ಜಿ.ಎಲ್. ಸಮೂಹ ಸಂಸ್ಥೆಗಳ ಜಿ.ಎಲ್. ಗ್ಲೋ, ಜಿ.ಎಲ್. ಪಾರ್ಥ, ಜಿ.ಎಲ್. ಪ್ರಾಚೀ, ಜಿ.ಎಲ್. ಹಾಸನ, ಜಿ.ಎಲ್. ಕುಶಾಲನಗರ ಒಟ್ಟು 5 ತಂಡಗಳು ಭಾಗವಹಿಸಿದ್ದು, ಅಂತಿಮವಾಗಿ ಹಾಸನ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು. ಜಿ.ಎಲ್. ಪಾರ್ಥ ದ್ವಿತೀಯ ಹಾಗೂ ಜಿ.ಎಲ್. ಪ್ರಾಚೀ ತೃತೀಯ ಸ್ಥಾನವನ್ನು ಪಡೆದುಕೊಂಡಿತು. ಸಂಸ್ಥೆಯ ನಿರ್ದೇಶಕರಾದ ಸುಧನ್ವ ಆಚಾರ್ಯ, ಅರುಂಧತಿ ಆಚಾರ್ಯ ಹಾಗೂ ಶ್ರೀರಾಮ ಆಚಾರ್ಯ ಇವರ ಉಪಸ್ಥಿತಿಯಲ್ಲಿ ವಿಜೇತರನ್ನು ಅಭಿನಂದಿಸಲಾಯಿತು ಹಾಗೂ ಸಂಸ್ಥೆಯ ನಿರ್ದೇಶಕರಿಂದ 2 ತಂಡಗಳ ಪ್ರದರ್ಶನ ಪಂದ್ಯ ನಡೆಯಿತು. ವೆಂಕಟೇಶ್ ಕೃಷ್ಣ ಭಟ್, ಅನಿಲ್ ಕುಮಾರ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.