- *ಗೋವನ್ನು ರಾಷ್ಟ್ರೀಯ ಸಂಪತ್ತನ್ನಾಗಿ ಘೋಷಿಸಬೇಕು-ನಾ.ಸೀತಾರಾಮ್
- *ಕೆಚ್ಚಲು ಕಡಿದವರ ಪರ ನಿಲ್ಲುವವರು ಗೋವಿನ ಯಾವುದೇ ಉತ್ಪನ್ನ ಬಳಸಬಾರದು-ಯತೀಶ್ ಆರ್ವಾರ
- *ಗೋವಿನ ಮೇಲಿನ ದೌರ್ಜನ್ಯ ನಡೆಸುವವರ ಪರ ಸರಕಾರದ ಮೃಧುಧೋರಣೆ-ಡಾ.ಕೃಷ್ಣ ಪ್ರಸನ್ನ
ಪುತ್ತೂರು: ಗೋಮಾತೆಯ ಕೆಚ್ಚಲು ಕತ್ತರಿಸಿದ ವಿಕೃತ ಮನಸ್ಸುಗಳನ್ನು ಖಂಡಿಸಿ ಪುತ್ತೂರು ಜಿಲ್ಲಾ ಗೋ ಸಂರಕ್ಷಣಾ ಸಮಿತಿ ವತಿಯಿಂದ ಜ.20ರಂದು ತಾಲೂಕು ಆಡಳಿತ ಸೌಧದ ಮುಭಾಗದ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿಕ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರಾರಂಭದಲ್ಲಿ ನೆಲ್ಲಿಕಟ್ಟೆ ಖಾಸಗಿ ಬಸ್ಸು ನಿಲ್ದಾಣದ ಬಳಿ ಗೋ ಪೂಜೆ ನೆರವೇರಿಸುವ ಮೂಲಕ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬಳಿಕ ಹೊರಟ ಮೆರವಣಿಗೆಯು ಕೆ.ಎಸ್.ಆರ್.ಟಿ.ಸಿ. ನಿಲ್ದಾಣ, ಗಾಂಧಿಕಟ್ಟೆ, ಕೋರ್ಟು ರಸ್ತೆಯ ಮೂಲಕ ಸಾಗಿ ತಾಲೂಕು ಆಡಳಿತ ಕಚೇರಿ ಎದುರಿನ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಗೋವನ್ನು ರಾಷ್ಟ್ರೀಯ ಸಂಪತ್ತನ್ನಾಗಿ ಘೋಷಿಸಬೇಕು-ನಾ.ಸೀತಾರಾಮ್
ರಾಷ್ಟೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಹ ಸೇವಾ ಪ್ರಮುಖ್ ನ. ಸೀತಾರಾಮ್ ಮಾತನಾಡಿ, ಭಾರತೀಯ ಹಿಂದೂ ಧರ್ಮದಲ್ಲಿ ಗೋವಿಗೆ ಅತ್ಯಂತ ಪವಿತ್ರ ಸ್ಥಾನವಿದ್ದು ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು ಎನ್ನುವ ಒತ್ತಾಯ ಈಗಾಗಲೇ ಇದೆ. ಆದರೆ ಗೋವನ್ನು ‘ರಾಷ್ಟ್ರೀಯ ಸಂಪತ್ತು’ ಎಂದು ಘೋಷಿಸುವಂತೆ ಎಲ್ಲರೂ ಆಗ್ರಹಿಸಬೇಕಾಗಿದೆ. ತಾಯಿ ಸಮಾನವಾದ ಗೋವಿನ ಮೇಲೆ ಕ್ರೌರ್ಯ ಮಾನಸಿಕತೆ ಪ್ರದರ್ಶಿಸುವವರು ಮನುಷ್ಯರೇ ಅಲ್ಲ. ಮನುಷ್ಯರು ಮಾತ್ರವಲ್ಲದೆ ಸಸ್ಯಕೋಟಿಯನ್ನು ಸಂರಕ್ಷಿಸುವ ಮಾತೆ ಗೋವು. ಕ್ರೂರ ರಾಕ್ಷಸೀ ಪ್ರವೃತ್ತಿ ಹೊಂದಿರುವವರು ಮಾತ್ರ ಗೋವಿನ ಮೇಲೆ ದೌರ್ಜನ್ಯ ನಡೆಸಲು ಸಾಧ್ಯ. ಇದರ ವಿರುದ್ಧ ಹಿಂದೂಗಳು ಪರಿಹಾರ ಕಂಡುಕೊಳ್ಳುವ ಸಂಕಲ್ಪ ಮಾಡಬೇಕು. ಹಿಂದೂಗಳ ತಾಳ್ಮೆಯ ಕಟ್ಟೆಯೊಡೆದಾಗ ಅದರ ಪರಿಣಾಮ ಹೇಗಿರುತ್ತದೆ ಎಂಬುದನ್ನು ಎದುರಿಸಿದ ಹಿಂದೂ ವಿರೋಧಿಗಳಿಗೆ ಮತ್ತೆ ನೆನಪು ಮಾಡಬೇಕು ಎಂದು ಹೇಳಿದರು.
ಸಿದ್ದರಾಮಯ್ಯ ‘ಶುದ್ಧರಾಮಯ್ಯ’ ಆಗಬೇಕಾದರೆ ಗೋವು ಅನಿವಾರ್ಯ:
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿನ ಹಿಂದೆ ರಾಮನ ಹೆಸರಿದೆ. ಆದರೆ ಅವರು ಯಾವುದರಲ್ಲಿ ಸಿದ್ದ. ಅವರು ಯಾವುದಕ್ಕೂ ಸಿದ್ಧವಿಲ್ಲದ ‘ಸಿದ್ದರಾಮಯ್ಯ’ ಅವರು ‘ಶುದ್ಧರಾಮಯ್ಯ’ ಆಗಬೇಕಾದರೆ ಗೋವು ಅನಿವಾರ್ಯ. ಸಿದ್ಧರಾಮಯ್ಯ ಅವರು ಜೀವನದ ಮೋಕ್ಷಕ್ಕಾದರೂ ಗೋವಿನ ಸಂರಕ್ಷಣೆಯ ಹೊಣೆಗಾರಿಕೆಯನ್ನು ನಿರ್ವಹಿಸಿ. ಇಂತಹ ಕ್ರೌರ್ಯಗಳಿಗೆ ಬೆಂಬಲಿಸುವ ಪ್ರವೃತ್ತಿ ಮುಂದುವರೆದರೆ ಮುಂದಿನ ಯಾವುದೇ ಜನ್ಮದಲ್ಲಿಯೂ ಯಾವ ಭಗವಂತ, ಯಾವುದೇ ಮಠಾಧಿಪತಿಗಳು ನಿಮ್ಮನ್ನು ನಿಮ್ಮನ್ನು ರಕ್ಷಣೆ ಮಾಡಿಕೊಳ್ಳಲೂ ಸಾಧ್ಯವಿಲ್ಲ ಎಂದು ನಾ. ಸೀತಾರಾಮ ಎಚ್ಚರಿಸಿದರು.
ಕೆಚ್ಚಲು ಕಡಿದವರ ಪರ ನಿಲ್ಲುವುದಾರೆ ಗೋವಿನ ಯಾವುದೇ ಉತ್ಪನ್ನ ಬಳಸಬಾರದು-ಯತೀಶ್ ಆರ್ವಾರ
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ್ ಮಾತನಾಡಿ, ಗೋವಿನ ಮಹತ್ವದ ಬಗ್ಗೆ ವಿಜ್ಞಾನಿಗಳು ವೈಜ್ಞಾನಿಕ ಅಧ್ಯಯನದಲ್ಲಿಯೂ ದೃಢಪಡಿಸಿದ್ದಾರೆ. ಗೋವು ಕೇವಲ ಪ್ರಾಣಿಯಲ್ಲ. ಧಾರ್ಮಿಕ, ನಂಬಿಕೆ, ಸಂಸ್ಕೃತಿಯ ಪ್ರತೀಕ. ಅದು ಹೆತ್ತ ತಾಯಿಗಿಂತಲೂ ಮಿಗಿಲು. ಗೋವಿನ ಹಾಲು, ಮೊಸರು, ಮಜ್ಜಿಗೆ ಕುಡಿದವರೇ ಗೋವಿನ ಕೆಚ್ಚಲು ಕಡಿಯುವ ಕೆಲಸಕ್ಕೆ ಮುಂದಾಗಿದ್ದಾರೆ. ಅವರು ಭಾರತದ ಹಿಂದು ಧರ್ಮದ ಶ್ರದ್ಧೆಯ ಮೇಲೆ ಕೈ ಹಾಕಿದ್ದಾರೆ. ಇದಕ್ಕೆ ಕಳೆದ 70 ವರ್ಷಗಳಿಂದ ಆಡಳಿತ ನಡೆಸಿದ ಜಿಹಾದಿ ಮಾನಸಿಕತೆಯ ಕಾಂಗ್ರೆಸ್ ನೇರ ಹೊಣೆಯಾಗಿದೆ. ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್‌ನವರು ಗೋಮಾತೆ ಕಚ್ಚಲು ಕಡಿದಾಗ ಒಂದೇ ಧ್ವನಿ ಎತ್ತದ ಮಾನಕೆಟ್ಟ ಆಡಳಿತ ನಮ್ಮನ್ನು ಆಳುತ್ತಿದೆ. ನಿರಂತರವಾಗಿ ಹಿಂದು ಧರ್ಮದ ವಿರುದ್ದ ಮಾತನಾಡುವ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರು ಕೆಚ್ಚಲು ಕಡಿದಾಗ ಯಾಕೆ ಮಾತನಾಡಿಲ್ಲ. ಅವರು ಮಾತನಾಡುವುದಿಲ್ಲವಾದರೆ ಹಾಲು ಹಾಕಿದ ಚಹಾ ಕುಡಿಯಬಾರದು. ಮೊಸರು ಹಾಕಿ ಊಟ ಮಾಡಬಾರದು. ನೀವು ಕೆಚ್ಚಲು ಕಡಿದವರ ಪರ ನಿಲ್ಲುವುದಾರೆ ಗೋವಿನ ಯಾವುದೇ ಉತ್ಪನ್ನ ಬಳಸಿ ಜೀವನ ಮಾಡಬಾರದು. ನೀವು ಮಾತನಾಡದಿದ್ದರೆ ಕುಡಿದ ಹಾಲು, ಮೊಸರಿನ ಪ್ರತಿ ಹನಿ ವಿಷವಾಗಿ ಪರಿಣಮಿಸಲಿದೆ ಎಂದರು. ಸಮಾಜದ ಮೇಲೆ ಏನೇ ನಡೆದ ಅಂದುಕೊಂಡರೆ ಅದು ನಿಮ್ಮ ವಿನಾಶಕ್ಕೆ ಕಾರಣವಾಗಲಿದೆ. ಪುತ್ತೂರು ಶಾಸಕರು ಕಾರ್ಯಕ್ರಮಗಳಲ್ಲಿ ತುಂಬಾ ಸ್ಟ್ರಂಟ್ ಮಾಡುತ್ತಾರೆ. ಆದರೆ ಇಂತಹ ವಿಚಾರಗಳಲ್ಲಿ ಮಾತನಾಡುತ್ತಿಲ್ಲ. ನಿಮ್ಮ ಕ್ಷೇತ್ರದ ಜನತೆಯೂ ಪ್ರತಿದಿನ ಹಾಲಿಲ್ಲದೆ ಬದುಕಲು ಸಾಧ್ಯವಿಲ್ಲ. ಗೋವಿನ ಮೇಲೆ ನಡೆದ ಕ್ರೌರ್ಯದ ಬಗ್ಗೆ ಯಾಕೆ ಮಾತನಾಡುವುದಿಲ್ಲ. ಮಾತನಾಡಿದರೆ ನಿಮ್ಮ ಜೊತೆಗಿರುವ ಜಿಹಾದಿಗಳಿಗೆ ಬೇಜಾರಾಗುತ್ತದೆ ಎಂದು ಮೌನ ವಹಿಸಿದ್ದೀರಾ? ನಿಮಗೆ ತಾಕತ್ತಿದ್ದರೆ ಅವರ ವಿರುದ್ದ ಮಾತನಾಡಿ ಗೋಮಾತೆ ಮೇಲಿನ ಅನ್ಯಾಯವನ್ನು ಖಂಡಿಸಿ, ಇಲ್ಲದಿದ್ದರೆ ಹಿಂದು ಸಮಾಜದ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ ತಿಳಿಸಿದರು.
ಗೋವಿನ ಮೇಲಿನ ದೌರ್ಜನ್ಯ ನಡೆಸುವವರ ಪರ ಸರಕಾರದ ಮೃಧುಧೋರಣೆ-ಡಾ.ಕೃಷ್ಣ ಪ್ರಸನ್ನ;
ವಿಶ್ವಹಿಂದು ಪರಿಷತ್‌ನ ಜಿಲ್ಲಾಧ್ಯಕ್ಷ ಕೃಷ್ಣಪ್ರಸನ್ನ ಮಾತನಾಡಿ, ಗೋವು ಇಲ್ಲದ ಸನಾತನ ಹಿಂದು ಧರ್ಮ ಕಲ್ಪಿಸಲು ಸಾಧ್ಯವಿಲ್ಲ. ಅಂತಹ ಗೋಮಾತೆಯ ಮೇಲೆ ಪೂಜಿಸುವ ಮಾತೆಯ ಮೇಲಿನ ಆಕ್ರಮಣವನ್ನು ಮಾಡುವ ಮತಾಂದರ ಕೃತ್ಯವನ್ನು ಉಗ್ರ ಶಬ್ದದಲ್ಲಿ ಖಂಡಿಸಬೇಕಾಗಿದೆ. ಪಾಕಿಸ್ಥಾನದ ಪರ ಕೂಗುವವರ ಮೇಲೆ ರಾಜ್ಯ ಸರಕಾರ ಮೃಧು ದೋರಣೆ ತಾಲುತ್ತಿದೆ. ಅಲ್ಲದೆ ಅದು ಅವರಿಗೆ ಸರಿಯಾಗಿ ಕೆಳಿಸುತ್ತಿಲ್ಲ. ಅಂತಹವರನ್ನು ಶಿಕ್ಷಕಿಸಲು ತಾಕತ್ತು ಇಲ್ಲದ ರಾಜ್ಯ ಸರಕಾರ ಗೋಹತ್ಯೆ, ದೌರ್ಜನ್ಯ ಮಾಡುವವರ ಮೇಲೆ ಮೃದು ಧೋರಣೆ ತಾಲುತ್ತಿದೆ. ಗೋವಿನ ಮೇಲೆ ದೌರ್ಜನ್ಯ ನಡೆಸಿದಾತನ ವಿರುದ್ಧ ಮೃದು ಧೋರಣೆ ತೋರುವ ರಾಜ್ಯ ಗೃಹ ಸಚಿವರು ಮಾನಸಿಕ ಅಸ್ವಸ್ಥ ಎಂಬ ಸರ್ಟಿಫಿಕೇಟ್ ನೀಡಿದ್ದಾರೆ. ಹಿಂದು ಸಮಾಜದ ಮೇಲೆ ದಾಳಿಗಳು ನಡೆದ ಅದನ್ನು ಆಕಸ್ಮಿಕ ಎಂದು ಬಿಂಬಿಸುತ್ತಾರೆ. ಇಂತಹ ಧೋರಣೆಯನ್ನೇ ತೋರುವ ವ್ಯವಸ್ಥೆಯನ್ನು ಸರಿ ಮಾಡುವ ಜವಾಬ್ದಾರಿ ಹಿಂದೂ ಸಮಾಜದ ಮೇಲಿದೆ. ಪಾಕಿಸ್ತಾನದಂತಹ ಎರಡು ದೇಶಗಳ ಜನಸಂಖ್ಯೆ ನಮ್ಮ ಕುಂಭಮೇಳದಲ್ಲಿ ಭಾಗವಹಿಸುತ್ತಾರೆ. ಇದು ಹಿಂದೂ ಸಮಾಜದ ಶಕ್ತಿ ಎಂದು ಅವರು ಹೇಳಿದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ಸುಳ್ಯ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಕೋಡಿಬೈಲು, ಪ್ರಶಾಂತ್ ನೆಕ್ಕಿಲಾಡಿ, ಮಹಿಳಾ ಘಟಕದ ಜಯಲಕ್ಷ್ಮಿ ಶಗ್ರಿತ್ತಾಯ, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಪ್ರಧಾನ ಕಾರ್ಯದರ್ಶಿ ನಾಗೇಶ್ ಪ್ರಭು, ಉಪಾಧ್ಯಕ್ಷ ಸಂತೋಷ್ ಕುಮಾರ್ ಕೈಕಾರ, ಅನಿಲ್ ತೆಂಕಿಲ, ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ಆರ್.ಸಿ ನಾರಾಯಣ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ವಿಜಯ ಕುಮಾರ ರೈ ಕೋರಂಗ, ಕಡಬ ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ, ತಾ.ಪಂ ಮಾಜಿ ಸದಸ್ಯರಾದ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ದಿವ್ಯಪುರುಷೋತ್ತಮ, ಹರೀಶ್ ಬಿಜತ್ರೆ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಗೌಡ ಇಚ್ಲಂಪಾಡಿ, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ನಗರ ಸಭಾ ಅಧ್ಯಕ್ಷೆ ಲೀಲಾವತಿ, ಸದಸ್ಯರಾದ ವಿದ್ಯಾ ಆರ್ ಗೌರಿ, ಇಂದಿರಾ ಪುರುಷೋತ್ತಮ, ಪಕ್ಷದ ಪ್ರಮುಖರಾದ ವಿಶ್ವೇಶ್ವರ ಭಟ್ ಬಂಗಾರಡ್ಕ, ಪುರುಷೋತ್ತಮ ಮುಂಗ್ಲಿಮನೆ, ಜಯಂತ ಶೆಟ್ಟಿ ಕಂಬಳತ್ತಡ್ಡ, ಪುನೀತ್ ಮಾಡತ್ತಾರು, ಪ್ರಕಾಶ್ಚಂದ್ರ ರೈ ಕೈಕಾರ, ಮೋಹನ ಪಕ್ಕಳ ಕುಂಡಾಪು, ಹರಿಪ್ರಸಾದ್ ಯಾದವ್, ರಾಜೇಶ್ ಬನ್ನೂರು, ಚಂದ್ರಶೇಖರ ರಾವ್, ಸ್ವರ್ಣಲತಾ ಹೆಗ್ಡೆ, ಸುನಿಲ್ ದಡ್ಡು, ಯು.ಲೋಕೇಶ್ ಹೆಗ್ಡೆ, ಸತೀಶ್ ನಾಯಕ್ ಪರ್ಲಡ್ಕ, ಉಷಾಚಂದ್ರ ಮುಳಿಯ, ಯಶಸ್ವಿನಿ ಶಾಸ್ತ್ರೀ, ಕಿರಣ್ ರೈ ಬಲ್ನಾಡು, ಜಯಶ್ರೀ ಎಸ್ ಶೆಟ್ಟಿ, ಯಶೋಧ ನರಿಮೊಗರು, ನವೀನ್ ರೈ ಕೈಕಾರ, ಶ್ರೀಧರ ತೆಂಕಿಲ, ನವೀನ್ ನೆರಿಯ, ಅಮರನಾಥ ರೈ, ರತನ್ ರೈ, ನಿತೀಶ್ ಶಾಂತಿವನ, ಮಹೇಶ್ ರೈ ಕೇರಿ, ಸುಬ್ರಾಯ ಶೆಟ್ಟಿಮಜಲು ಸೇರಿದಂತೆ ಬಿಜೆಪಿ ಪಕ್ಷದ ಹಾಗೂ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸಂಘಟನೆಯ ವಿಶಾಖ್ ಸಸಿಹಿತ್ಲು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.