ಪುತ್ತೂರು: ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಡಯಟ್, ಇಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆ ಕಾರ್ಯಕ್ರಮದ ಅಡಿಯಲ್ಲಿ ನಡೆದ ಶ್ರೀಆಲೂರು ವೆಂಕಟರಾವ್ ಭಾಷಾ ಕೌಶಲ್ಯ ಕೇಂದ್ರದ ಅನುಮೋದಿತ ಕ್ರೀಯಾ ಯೋಜನೆಯ ಪಠ್ಯಪುಸ್ತಕ ಆಧಾರಿತ ನಾಟಕ ಸ್ಪರ್ಧೆಯಲ್ಲಿ ಹಾರಾಡಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳು ಹೈಸ್ಕೂಲ್ ವಿಭಾಗದ ಇಂಗ್ಲೀಷ್ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದಿರುತ್ತಾರೆ. ಪ್ರಾಥಮಿಕ ವಿಭಾಗದಲ್ಲಿ 7ನೇ ತರಗತಿ ವಿದ್ಯಾರ್ಥಿಗಳ ನಾಟಕ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.
ಏಳನೇ ತರಗತಿಯ ಇಂಗ್ಲೀಷ್ ಪಠ್ಯ ಪುಸ್ತಕದ “ಏಕಲವ್ಯ” ನಾಟಕದಲ್ಲಿ ಜೀವಿತ, ಆರಾಧ್ಯ, ಸುಮನಾ, ಭೂಮಿಕಾ, ಆಕಾಂಕ್ಷ, ಅನ್ವಿತರವರು ಅಭಿನಯಿಸಿದ್ದರು. ಶಿಕ್ಷಕಿ ಧನ್ಯ ನಾಟಕ ನಿರ್ದೇಶಿಸಿದರು. 8ನೇ ತರಗತಿಯ ಇಂಗ್ಲೀಷ್ ಪಠ್ಯದ “ದಿ ಎಂಪಾರರ್ಸ್ ನ್ಯೂ ಕ್ಲೋತ್ಸ್” ಎಂಬ ಹಾಸ್ಯ ನಾಟಕದಲ್ಲಿ ಸಫಾ, ಸ್ತುತಿ, ಮೌಲ್ಯ, ಶ್ರೇಯಾ, ಶ್ರಾವ್ಯ ಹಾಗೂ ನೂತನ ಕೃಷ್ಣ ಪಾತ್ರಗಳಾಗಿ ಅಭಿನಯಿಸಿದ್ದರು ಎಂದು ಮುಖ್ಯಗುರು ಕೆ.ಕೆ ಮಾಸ್ತರ್ ತಿಳಿಸಿದರು. ಪದವೀಧರ ಶಿಕ್ಷಕರಾದ ಜನಾರ್ಧನ ದುರ್ಗ ನಾಟಕ ನಿರ್ದೇಶಿಸಿದ್ದಾರೆ.