ಪುತ್ತೂರು: ಎಸ್.ಕೆ.ಎಸ್.ಎಸ್.ಎಫ್ ದ.ಕ ಈಸ್ಟ್ ಜಿಲ್ಲೆ ವತಿಯಿಂದ ಜ.26ರಂದು ಕುಂಬ್ರದಲ್ಲಿ ನಡೆಯಲಿರುವ ಮಾನವ ಸರಪಳಿ ಕಾರ್ಯಕ್ರಮದ ಬಗ್ಗೆ ಸಮಾಲೋಚನಾ ಸಭೆ ಹಾಗೂ ಸ್ಥಳೀಯ ನಾಯಕರ ಸಂಗಮ ಕೆ.ಐ.ಸಿ ಸಭಾಂಗಣದಲ್ಲಿ ನಡೆಯಿತು.
ರಾಜ್ಯ ಕಾರ್ಯದರ್ಶಿ ಅನೀಸ್ ಕೌಸರಿಯವರು ಕಾರ್ಯಕ್ರಮದ ರೂಪುರೇಷೆ ಹಾಗೂ ಕಾರ್ಯಕ್ರಮ ನಿರ್ವಹಣೆಯ ಬಗ್ಗೆ ವಿವರಿಸಿದರು. ಮಾನವ ಸರಪಳಿ ಸ್ವಾಗತ ಸಮಿತಿ ಚೇರ್ಮನ್ ಮಹಮ್ಮದ್ ಕೆ.ಎಚ್ ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಮಿತಿ ವರ್ಕಿಂಗ್ ಕನ್ವೀನರ್ ಸಿದ್ದೀಕ್ ಸುಲ್ತಾನ್ ಕಾರ್ಯಕ್ರಮದ ಬಗ್ಗೆ ವಿವರಿಸಿದರು. ಸಭೆಯಲ್ಲಿ ಎಸ್.ಕೆ.ಎಸ್.ಎಸ್.ಎಫ್ ರಾಜ್ಯ ನಾಯಕ ಇಬ್ರಾಹಿಂ ಬಾತಿಷಾ ಕೊಡ್ಲಿಪೇಟೆ, ಮಾನವ ಸರಪಳಿ ಮೀಡಿಯಾ ವ್ಯವಸ್ಥಾಪಕ ಅಬ್ದುಲ್ಲ ನಯೀಮಿ ಕುಕ್ಕಾಜೆ ಉಪಸ್ಥಿತರಿದ್ದರು. ಅಶ್ರಫ್ ಸಾರೆಪುಣೆ ನೇತೃತ್ವದ ಏಕದಿನ ಕಾರ್ಯಾಗಾರ ಸಮಿತಿಯನ್ನು ಇದೇ ಸಂದರ್ಭದಲ್ಲಿ ರಚಿಸಲಾಯಿತು.
ಸಭೆಯಲ್ಲಿ ಬಶೀರ್ ಕೌಡಿಚ್ಚಾರು, ಶಾಫಿ ಬೇರಿಕೆ, ಶರೀಫ್ ಪಾಳ್ಯತ್ತಡ್ಕ, ಆದಂ ಕೆ.ಟಿ, ಝೈನುದ್ದೀನ್ ಹಾಜಿ, ರಾಶಿದ್ ಸುಲ್ತಾನ್ ನಗರ, ಹಫೀಝ್ ಈಶ್ವರಮಂಗಲ ಹಾಗೂ ಕೆಐಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.