ಪುತ್ತೂರು: ಹಾರಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ.22ರಂದು ಮೆಟ್ರಿಕ್ ಮೇಳದ ಸಂಭ್ರಮ ಕಳೆಗಟ್ಟಿತ್ತು. ನಗರಸಭೆ ಸದಸ್ಯೆ ಹೇಮಲತಾ ನಂದಿಲ ಮೆಟ್ರಿಕ್ ಮೇಳದ ಲೋಗೋವನ್ನು ಪರದೆ ಸರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಮೆಟ್ರಿಕ್ ಮೇಳವು ಮಕ್ಕಳ ವ್ಯವಹಾರ ಜ್ಞಾನಕ್ಕೆ ಅವಶ್ಯಕ ಎಂದರು.
ಮುಖ್ಯಶಿಕ್ಷಕ ಕೆ.ಕೆ ಮಾಸ್ತರ್ ವ್ಯಾಪಾರದಿಂದ ಆಗುವ ಕಲಿಕೆಯ ಬಗ್ಗೆ ತಿಳಿಸಿದರು. ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರವೀಂದ್ರ ಶುಭಹಾರೈಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷೆ ಸುಲೋಚನಿ ಶುಭ ಹಾರೈಸಿದರು. ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಇಸ್ಮಾಯಿಲ್ ಬೊಳುವಾರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ವೈವಿಧ್ಯಮಯ ಅಂಗಡಿ ಮಳಿಗೆಗಳ ಮೂಲಕ ಗಮನ ಸೆಳೆದರು. ಪೋಷಕರು, ಮಕ್ಕಳು ಮಳಿಗೆಗಳಿಂದ ಸಾಮಾಗ್ರಿ ಖರೀದಿಸಿದರು.