ಪುತ್ತೂರು: ಬದ್ರಿಯಾ ಜುಮಾ ಮಸೀದಿ ಸಂಟ್ಯಾರ್ ಅಧೀನದಲ್ಲಿರುವ ಬದ್ರಿಯಾ ಗಲ್ಫ್ ಫ್ರೆಂಡ್ಸ್ ಸಂಟ್ಯಾರ್ ವತಿಯಿಂದ ಅನ್ಸಾರಿಯಾ ಯಂಗ್ಮೆನ್ಸ್ ಎಸೋಸಿಯೇಷನ್ ಹಾಗೂ ಇನ್ಫೋಮೇಟ್ ಫೌಂಡೇಶನ್ ಸಹಯೋಗದೊಂದಿಗೆ ಸಂಟ್ಯಾರ್ ಮದ್ರಸ ಸಭಾಂಗಣದಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಡಿಗ್ರಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ “+ve Career”ಶೈಕ್ಷಣಿಕ ಕಾರ್ಯಾಗಾರ ನಡೆಯಿತು.
ಬದ್ರಿಯಾ ಜುಮಾ ಮಸೀದಿ ಖತೀಬ್ ಅಬ್ದುಲ್ ಲತೀಫ್ ಹನೀಫಿ ದುವಾ ನಿರ್ವಹಿಸಿ ಮಾತನಾಡಿದರು. ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಫಾರೂಕ್ ಸಂಟ್ಯಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬದ್ರಿಯಾ ಗಲ್ಫ್ ಫ್ರೆಂಡ್ಸ್ ಕೋಶಾಧಿಕಾರಿ ಮಹಮ್ಮದ್ ಅಲಿ ಮರಿಕೆಯವರು ಗಲ್ಫ್ ಫ್ರೆಂಡ್ಸ್ನ ಮುಂದಿನ ಯೋಜನೆಗಳನ್ನು ವಿವರಿಸಿ ಜಮಾತಿಗರ ಬೆಂಬಲ ಕೋರಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಇನ್ಫೋಮೇಟ್ ಫೌಂಡೇಶನ್ ನಿರ್ದೇಶಕರಾದ ಖಾದರ್ ನಾವೂರು ಹಾಗೂ ಅರ್ಫಾಝ್ ತರಬೇತಿ ನೀಡಿದರು. ವೇದಿಕೆಯಲ್ಲಿ ಜಮಾತ್ ಕಮಿಟಿಯ ಪ್ರ.ಕಾರ್ಯದರ್ಶಿ ಹಮೀದ್ ಕಲ್ಲರ್ಪೆ, ಅನ್ಸಾರಿಯಾ ಯಂಗ್ಮೆನ್ಸ್ ಎಸೋಸಿಯೇಷನ್ ಅಧ್ಯಕ್ಷ ಪವಾಝ್ ಮರಿಕೆ ಉಪಸ್ಥಿತರಿದ್ದರು. ಯಂಗ್ಮೆನ್ಸ್ ಕಾರ್ಯದರ್ಶಿ ರಮೀಝ್ ಆಲಿಸ್ ಸಂಟ್ಯಾರ್ ವಂದಿಸಿದರು. ಯಂಗ್ಮೆನ್ಸ್ ಜೊತೆ ಕಾರ್ಯದರ್ಶಿ ರಾಯಿಝ್ ಬಳಕ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.