ಕೆರೆಮೂಲೆ ಧೂಮಾವತಿ, ಪರಿವಾರ ದೈವಗಳ ತರವಾಡು ಮನೆಯಲ್ಲಿ ತರವಾಡು ಮನೆ ಗೃಹಪ್ರವೇಶ, ದೈವಗಳ ಪ್ರತಿಷ್ಠೆ

0

ಪುತ್ತೂರು:ಸಾಲ್ಮರ ಕೆರೆಮೂಲೆಯಲ್ಲಿರುವ ಧೂಮಾವತಿ ಮತ್ತು ಪರಿವಾರ ದೈವಗಳ ತರವಾಡು ಮನೆಯಲ್ಲಿ ತರವಾಡು ಮನೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ತರವಾಡು ಮನೆಯ ಗೃಹಪ್ರವೇಶ ಮತ್ತು ಕಲ್ಲುರ್ಟಿ, ಕೊರತಿ, ಕುಪ್ಪೆ ಪಂಜುರ್ಲಿ ವರ್ಣರ ಪಂಜುರ್ಲಿ, ಧೂಮಾವತಿ, ಗುಳಿಗ ದೈವಗಳ ಪ್ರತಿಷ್ಠೆ ಜ.24ರಂದು ವಿವಿಧ ವೈದಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು.


ವೇ.ಮೂ ಸುಬ್ರಹ್ಮಣ್ಯ ಬಳ್ಳಕ್ಕುರಾಯರವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜ.23ರಂದು ಸಂಜೆ ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ, ಆಲಯ ಪರಿಗ್ರಹ, ಪ್ರಾರ್ಥನೆ, ಸ್ಥಳಶುದ್ಧಿ, ರಕ್ಷೆಘ್ನಹೋಮ, ವಾಸ್ತುಹೋಮ, ವಾಸ್ತುಬಲಿ, ದಿಕ್ಪಾಲಬಲಿ, ಬಿಂಬಾಧಿವಾಸ, ರಕ್ಷೆ ಹಾಗೂ ಅನ್ನಸಂತರ್ಪಣೆ ನಡೆಯಿತು.

ಜ.24ರಂದು ಗಣಹೋಮ, ಬೆಳಿಗ್ಗೆ ತರವಾಡು ಮನೆಯ ಗೃಹಪ್ರವೇಶ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ ಮಧ್ಯಾಹ್ನ ಮುಡಿಪು ಪೂಜೆ, ಶ್ರೀಸತ್ಯನಾರಾಯಣ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.


ಸಂಜೆ ದೈವಗಳ ಭಂಡಾರ ತೆಗೆದು ದೈವಗಳ ನೇಮೋತ್ಸವ ರಾತ್ರಿ ಅನ್ನಸಂತರ್ಪಣೆ ನಂತರ ದೈವಗಳ ನೇಮೋತ್ಸವ ನಡೆಯಲಿದೆ ಎಂದು ತರವಾಡು ಮನೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here