ಪುತ್ತೂರು: ವ್ಯಕ್ತಿತ್ವ ವಿಕಸನ ಮತ್ತು ತರಬೇತಿಯ ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಯಾದ JCI ನ ಪುತ್ತೂರು ಘಟಕ ಆಡಳಿತ ಮಂಡಳಿಯ ಪ್ರಥಮ ಸಾಮಾನ್ಯ ಸಭೆಯು ಜ.23ರಂದು ರಂದು JCI ಮುಳಿಯ ಹಾಲ್ ನಲ್ಲಿ JCI ನ 2025 ರ ಸಾಲಿನ ಅಧ್ಯಕ್ಷ JC ಭಾಗ್ಯೇಶ್ ರೈ ರವರ ನೇತೃತ್ವದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪೂರ್ವಧ್ಯಕ್ಷರಾದ JC ಕೃಷ್ಣ ನಾರಾಯಣ ಮುಳಿಯರವರು ಅತಿಥಿಯಾಗಿ ಆಗಮಿಸಿ, JCI ಪುತ್ತೂರು ಘಟಕವು ಯಾವ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕೆಂದು ಮಾಹಿತಿ ನೀಡಿ, JCI ಪುತ್ತೂರಿನ ಎಲ್ಲಾ ಕಾರ್ಯಕ್ರಮಗಳಿಗೆ ಸದಾ ನಮ್ಮ ಬೆಂಬಲ ಮತ್ತು ಸಹಕಾರ ಇರುತ್ತದೆ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಆತಿಥ್ಯವನ್ನು JC ಕೃಷ್ಣನಾರಾಯಣ ಮುಳಿಯ ಮತ್ತು JC ಅಶ್ವಿನಿ ಕೃಷ್ಣ ಮುಳಿಯರವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಾರ್ವಜನಿಕ ಸೇವೆ ಮತ್ತು ಸ್ಪಂದನೆಗಾಗಿ ಪುತ್ತೂರು ನಗರ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿ, ‘ದಿ ಸೈಲೆಂಟ್ ವರ್ಕರ್’ JCI ಅಭಿಯಾನದಡಿಯಲ್ಲಿ ತೆಂಗು ಮತ್ತು ಅಡಕೆ ಮರವಿರುವ ಮಾಡಾವಿನ 37ರ ಹರೆಯದ ದಿನೇಶ್ ರವರನ್ನು ಸನ್ಮಾನಿಸಲಾಯಿತು. ವೈವಾಹಿಕ ಜೀವನಕ್ಕೆ ಪಾದರ್ಪಣೆ ಮಾಡಿದ JCI ಪುತ್ತೂರಿನ ಉಪಾಧ್ಯಕ್ಷ (ಕಾರ್ಯಕ್ರಮ) JC ರಾಜಶೇಖರ್ ದಂಪತಿಗಳನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
JCI ಪುತ್ತೂರಿಗೆ ಹೊಸ ಸೇರ್ಪಡೆಗೊಂಡ ಸದಸ್ಯರಿಗೆ ಪೂರ್ವಾಧ್ಯಕ್ಷೆ JC ಸ್ವಾತಿ ಜೆ ಶೆಟ್ಟಿ ರವರು ತರಬೇತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
JCI ಅಧ್ಯಕ್ಷರಾದ JC ಭಾಗ್ಯೇಶ್ ರೈ ಮಾತನಾಡಿ, 2025 ಸಾಲಿನ JCI ಪುತ್ತೂರು ಘಟಕದ ಎಲ್ಲಾ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರವನ್ನು ನೀಡುವಂತೆ ಸದಸ್ಯರನ್ನು ವಿನಂತಿಸಿದರು, ನಿಕಟಪೂರ್ವ ಅಧ್ಯಕ್ಷರಾದ JC ಮೋಹನ್ ಕೆ ರವರು ಸ್ವಚ್ಛ ಪುತ್ತೂರು, ಪ್ಲಾಸ್ಟಿಕ್ ಮುಕ್ತ ಪುತ್ತೂರು ಕಾರ್ಯಕ್ರಮವನ್ನು ಈ ವರ್ಷವೂ ಮುಂದುವರಿಸಲಿದ್ದೇವೆ, ಇದಕ್ಕೆ ಡ್ರಗ್ಸ್ ಮುಕ್ತ ಪುತ್ತೂರು ಹಾಗೂ ಸೈಬರ್ ಕ್ರೈಂ ಜಾಗೃತಿ ಕಾರ್ಯಕ್ರಮಗಳನ್ನು ಸೇರಿಸಿಕೊಂಡು ಇನ್ನಷ್ಟು ಅರ್ಥಪೂರ್ಣವಾಗಿ ಕಾರ್ಯಕ್ರಮಗಳನ್ನು ಆಯೋಜಿಸಲು ತಮ್ಮೆಲ್ಲರ ಸಹಕಾರ ಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಲಯ ಪೂರ್ವ ಅಧ್ಯಕ್ಷ JC ಸುಹಾಸ್ ಮರಿಕೆ ,ಕಾರ್ಯದರ್ಶಿ JC ಮನೋಹರ್ ಪಾಟಾಳಿ, ಮಹಿಳಾ ಘಟಕದ ಸಂಯೋಜಕ JC ಆಶಾ ಮೋಹನ್ , JJC ಸ್ವಸ್ತಿ ಶೆಟ್ಟಿ ಹಾಗೂ ಪೂರ್ವ ಅಧ್ಯಕ್ಷರುಗಳು, ಘಟಕ ಆಡಳಿತ ಮಂಡಳಿ ಸದಸ್ಯರು ,JCI ಪುತ್ತೂರಿನ ಎಲ್ಲಾ ಸದಸ್ಯರು ಭಾಗವಹಿಸಿದ್ದರು.