ನಿಡ್ಪಳ್ಳಿ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸ್ವಚ್ಚ ಭಾರತ್ ಮಿಷನ್ ಗ್ರಾಮೀಣ ಜಿಲ್ಲಾ ನೆರವು ಘಟಕ, ದ.ಕ.ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಪುತ್ತೂರು, ಗ್ರಾಮ ಪಂಚಾಯತ್ ನಿಡ್ಪಳ್ಳಿ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಸ್ವಚ್ಚ ನಿಡ್ಪಳ್ಳಿ ಬೃಹತ್ ಸ್ವಚ್ಚತಾ ಶ್ರಮದಾನ ಕಾರ್ಯಕ್ರಮ ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನ ಮತ್ತು ಗುತ್ತು ಚಾವಡಿ ಪರಿಸರ ಹಾಗೂ ನಿಡ್ಪಳ್ಳಿ ಶಾಲಾ ವ್ಯಾಪ್ತಿಯಲ್ಲಿ ಜ.25 ರಂದು ನಡೆಯಿತು.
ನಿಡ್ಪಳ್ಳಿ ಶಾಲೆಯಿಂದ ಗುತ್ತು ಚಾವಡಿ, ಶ್ರೀ ಶಾಂತದುರ್ಗಾ ದೇವಸ್ಥಾನ ಹಾಗೂ ಉಳ್ಳಾಕುಲು ಮಾಡದವರೆಗೆ ರಸ್ತೆ ಬದಿ ಮತ್ತು ಪರಿಸರ ಸುತ್ತ ಮುತ್ತ ಇರುವ ಪ್ಲಾಸ್ಟಿಕ್ ಮತ್ತು ಇತರ ಕಸ ತ್ಯಾಜ್ಯವನ್ನು ಸ್ವಚ್ಚ ಗೊಳಿಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್, ಸದಸ್ಯೆ ಗೀತಾ.ಡಿ, ಪಿಡಿಒ ಸಂಧ್ಯಾಲಕ್ಷ್ಮೀ, ನಾಗೇಶ ಗೌಡ,ಪಂಚಾಯತ್ ಸಿಬ್ಬಂದಿ ಜಯ ಕುಮಾರಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿ.ಎಚ್.ಒ ಲಕ್ಷ್ಮೀ,ಯೋಜನೆಯ ಸೇವಾ ಪ್ರತಿನಿಧಿ ಶಾಲಿನಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪಶುಸಖಿ, ಕೃಷಿ ಸಖಿಯರು, ಸಂಜೀವಿನಿ ಒಕ್ಕೂಟದ ಸದಸ್ಯರು, ಸ್ವಚ್ಚತಾ ಸಿಬ್ಬಂದಿಗಳು ಮತ್ತೀತರರು ಪಾಲ್ಗೊಂಡರು.