ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್‌ನಲ್ಲಿ ಗಣರಾಜ್ಯೋತ್ಸವ ನಡೆಯಿತು. ನಿಕಟಪೂರ್ವ ಉಪಾಧ್ಯಕ್ಷೆ ಪೂರ್ಣಿಮಾ ರೈ ಧ್ವಜಾರೋಹಣ ನೆರವೇರಿಸಿದರು.
ಅಭಿವೃದ್ದಿ ಅಧಿಕಾರಿ ನಾಗೇಶ್ ಸ್ವಾಗತಿಸಿ, ಗಣರಾಜ್ಯೋತ್ಸವದ ಮಹತ್ವವನ್ನು ತಿಳಿಸಿದರು. ಸದಸ್ಯರಾದ ಪವಿತ್ರ ರೈ ಬಾಳಿಲ, ಹರೀಶ ನಾಯಕ್, ನೇಮಾಕ್ಷ ಸುವರ್ಣ, ಯಾಕೂಬ್, ಕಲಾವತಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರೇಡ್-1 ಕಾರ್ಯದರ್ಶಿ ಮೋನಪ್ಪ ಕೆ ವಂದಿಸಿದರು.
ನಂತರ ಗ್ರಾಮ ಪಂಚಾಯತ್ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ, ಗ್ರಾಮ ಪಂಚಾಯತ್ ಸದಸ್ಯರು, ಆಶಾ ಕಾರ್ಯಕರ್ತೆಯರು, ಸರೋವರ ಸಂಜೀವಿನಿ ಒಕ್ಕೂಟದ ಸದಸ್ಯರು, ಸಂಪ್ಯ ಜುಮ್ಮಾ ಮಸೀದಿ ಬಾಂಧವರು, ಅಧ್ಯಾಪಕ ವೃಂದ ಸಂಪ್ಯ ಜುಮ್ಮಾ ಮಸೀದಿ, ಎಸ್‌ಕೆಎಸ್‌ಎಸ್‌ಎಫ್ ಶಾಖೆ ಹಾಗೂ ಎಸ್‌ಎಸ್‌ಎಫ್ ಸಂಪ್ಯ ಶಾಖೆ ಸದಸ್ಯರಿಂದ ಸಂಪ್ಯದಿಂದ ಕಲ್ಲರ್ಪೆ ತನಕ ಬೃಹತ್ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.