ಪುತ್ತೂರು: ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಮತ್ತು ಲಿಯೋ ಕ್ಲಬ್ ಪುತ್ತೂರ್ದ ಮುತ್ತು ಇವರ ನೇತೃತ್ವದಲ್ಲಿ ರೋಟರಿ ಕ್ಲಬ್ ಪುತ್ತೂರು ಕಣ್ಣಿನ ಆಸ್ಪತ್ರೆ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು ನೇತ್ರ ಜ್ಯೋತಿ ಚಾರಿ ಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು, ಡಾ / ದಯಾನಂದ ಪೈ ಮತ್ತು ಸತೀಶ್ ಪೈ ಚಾರಿ ಟೇಬಲ್ ಟ್ರಸ್ಟ್ , ಸೆಂಚುರಿ ಗ್ರೂಪ್ ಬೆಂಗಳೂರು, ಡಾ / ಲಾಲ್ ಪ್ಯಾಥ್ ಲ್ಯಾಬ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಣ್ಣಿನ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಮೆತಡ್ಕದಲ್ಲಿ ಜ.25ರಂದು ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇದರ ಅಧ್ಯಕ್ಷರಾದ ಲಯನ್ ವೇದಾವತಿ ರಾಜೇಶ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ರಮೇಶ್ ಪುತ್ತೂರು 2 ಶಾಖೆ, ಮೆಸ್ಕಾಂ ಇವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.ಡಾ .ಅಂಬಿಕಾ ಕಿಶೋರ್,ಸಾಮೆತಡ್ಕ ಶಾಲೆಯ ಟ್ರಸ್ಟಿನ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್, ಎಸ್. ಡಿ ಎಮ್. ಸಿ ಯ ಅಧ್ಯಕ್ಷರಾದ ಶಿವಪ್ರಸಾದ್ ಕೆಮ್ಮಿಂಜೆ, ಶಾಲಾ ಶಿಕ್ಷಣ ತಜ್ಞರಾದ, ಶಾಲಾ ಮುಖ್ಯ ಗುರುಗಳಾದ ಮರಿಯಾ ಅಶ್ರಫ್ ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಸಂಯೋಜಕರಾದ ಲಯನ್ ರವೀಂದ್ರ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾಭಿಮಾನಿ ದಿನೇಶ್ ಕಾಮತ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ಉಷಾ ಲತಾ, ಖಜಾಂಚಿ ವತ್ಸಲ ಶೆಟ್ಟಿ, ರಂಜಿನಿ ಶೆಟ್ಟಿ, ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು. ಶಾಲಾ ಮಕ್ಕಳು ಪ್ರಾರ್ಥಿಸಿ,ಲಯನ್ ವೇದಾವತಿ ರಾಜೇಶ್ ಸ್ವಾಗತಿಸಿದರು.ಲಯನ್ ಅನಸೂಯ ವಂದಿಸಿದರು.