ಪುತ್ತೂರು: ಪುತ್ತೂರಿನ ಅನುರಾಗ ವಠಾರದಲ್ಲಿ ಕುಶಲ ಹಾಸ್ಯ ಪ್ರಿಯರ ಸಂಘದ ಕಾರ್ಯಕ್ರಮವು ಜ.25ರಂದು ನಡೆಯಿತು. ಅಧ್ಯಕ್ಷತೆಯನ್ನು ಧ್ಯಾನಗಿರಿ ಆಂಜನೇಯ ದೇವಸ್ಥಾನದ ಮುಖ್ಯಸ್ಥ ಗಣೇಶ ಕೆದಿಲಾಯರು ವಹಿಸಿ ಮಾತನಾಡಿ ಮಹತೋಭಾರ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಸೇವಾ ನಿರತರಾಗಿದ್ದ ವೇಳೆ ನಡೆದ ಕೆಲವು ಸ್ವಾರಸ್ಯಕರ ಘಟನೆಗಳು ಹಾಗೂ ಅನುಭವಗಳನ್ನು ಉಲ್ಲೇಖಿಸಿದರು.
ನಿವೃತ್ತ ಪ್ರೊ. ವಿ.ಬಿ. ಅರ್ತಿಕಜೆ, ಸುದಾಮ ಕೆದಿಲಾಯ, ಸುಬ್ರಹ್ಮಣ್ಯ ಶರ್ಮ, ಶಂಕರಿ ಶರ್ಮ ನಗೆ ಚಟಾಕಿಗಳಿಂದ ಸಭಿಕರನ್ನು ರಂಜಿಸಿದರು. ಪರೀಕ್ಷಿತ್ ತೋಳ್ಪಾಡಿಯವರು ವಿಷ್ಣು ಸಹಸ್ರನಾಮದಲ್ಲಿ ಅವರಿಷ್ಟದ ಸುಯಾಮುನ ಎಂಬ ನಾಮದ ಒಳಾರ್ಥವನ್ನು ತಿಳಿಸಿದರು.
ಸಂಘದ ಅಧ್ಯಕ್ಷ ಸತ್ಯೇಶ್ ಕೆದಿಲಾಯರು ಸ್ವಾಗತಿಸಿ, ಪರಿಚಯಿಸಿದರು.ಪಾರ್ವತಿ ಭಟ್ ಪ್ರಾರ್ಥಿಸಿದರು. ಉಪಾಧ್ಯಕ್ಷ ಸುಬ್ರಹ್ಮಣ್ಯ ಶರ್ಮರು ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.