ಈಡನ್ ಗ್ಲೋಬಲ್ ಶಾಲೆಯಲ್ಲಿ ‘ಈಡನ್ ಹಬಿನೋಸ್’ ವಿಜ್ಞಾನ ಮೇಳ, ಝೆಸ್ಟೋರ ಉದ್ಯಮ ಶೀಲತ್ವ ಕಾರ್ಯಕ್ರಮ

0

ಪುತ್ತೂರು: ಬೆಳಂದೂರು ಈಡನ್ ಗ್ಲೋಬಲ್ ಸ್ಕೂಲ್ ಇದರ ಈಡನ್ ಹಬಿನೋಸ್-2025 ವಿಜ್ಞಾನ ಮೇಳ ಮತ್ತು ಝೆಸ್ಟೋರ ಉದ್ಯಮಶೀಲತ್ವ ಕಾರ್ಯಕ್ರಮ ನಡೆಯಿತು.
ಈಡನ್ ಗ್ಲೋಬಲ್ ಶಾಲೆಯು ಮಕ್ಕಳಲ್ಲಿ ಇರುವ ಕೌಶಲ್ಯಗಳನ್ನು ಹೊರತರಲು ಹಬಿನೋಸ್ ವಿಜ್ಞಾನ ಮೇಳವನ್ನು ಪ್ರತೀ ಎರಡು ವರ್ಷಕ್ಕೊಮ್ಮೆ ಆಯೋಜಿಸುತ್ತಿದ್ದು ಮಕ್ಕಳು ಮತ್ತು ಹೆತ್ತವರು ತಯಾರಿಸಿದ ವಿವಿಧ ವಿಷಯಗಳಿಗೆ ಸಂಬಂಧಿಸಿದ ವಿಜ್ಞಾನ ಮಾದರಿಗಳನ್ನು ತಯಾರಿಸಿ ಸಂದರ್ಶನಕ್ಕೆ ಇಡಲಾಗುತ್ತದೆ.


ಕಾರ್ಯಕ್ರಮವನ್ನು ಆಡಳಿತ ಸಮಿತಿಯ ಸದಸ್ಯರಾದ ಪುತ್ತುಬಾವ ಹಾಜಿ ಉದ್ಘಾಟಿಸಿದರು. ಅತಿಥಿಯಾಗಿ ಆಗಮಿಸಿದ ರಾಜ್ಯ ಮಟ್ಟದ ಉತ್ತಮ ವಿಜ್ಞಾನ ಶಿಕ್ಷಕ ಗೌರವ ಪುರಸ್ಕೃತ ಇಬ್ರಾಹಿಂ ಎಸ್.ಎಂ ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಇಬ್ರಾಹಿಂ ಎಸ್.ಎಂ ಅವರ ಸಾಧನೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು.


ನಂತರ ಮಕ್ಕಳ ಹೆತ್ತವರಿಗೆ ಮತ್ತು ಸಾರ್ವಜನಿಕರಿಗೆ ಸಂದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಪೋಷಕರಾದ ಮುಹಮ್ಮದ್ ರಾಫಿ ಅವರ ಪ್ರಾಚೀನ ಕಾಲದ ವಸ್ತುಗಳ ಸಂಗ್ರಹವು ಕಾರ್ಯಕ್ರಮಕ್ಕೆ ಮೆರುಗು ಮೆರುಗನ್ನು ನೀಡಿತು. ಶಾಲಾ ವಿಜ್ಞಾನ ವಿಭಾಗದ ಶಿಕ್ಷಕಿಯರಾದ ಮುನಿಝ ಮತ್ತು ಅಫ್ರೀನ ಕಾರ್ಯಕ್ರಮದ ಸಂಚಾಲಕರಾಗಿ ಕಾರ್ಯನಿರ್ವಹಿಸಿದರು.
ಕಾರ್ಯಕ್ರಮದ ಇನ್ನೊಂದು ಭಾಗವಾಗಿ ಮಕ್ಕಳಲ್ಲಿ ವ್ಯವಹಾರ ಜ್ಞಾನವನ್ನು ಮೂಡಿಸಲು ಝೆಸ್ಟೋರ ಉದ್ಯಮಶೀಲತ್ವವನ್ನು ಆಯೋಜಿಸಲಾಗಿತ್ತು. ಉದ್ಯಮಶೀಲತ್ವ ಕಾರ್ಯಕ್ರಮವನ್ನು ಶಾಲೆಯ ಆಡಳಿತ ಸಮಿತಿಯ ಸದಸ್ಯರಾದ ಅಬ್ದುಲ್ ಖಾದರ್ ಹಾಜಿ ಉದ್ಘಾಟಿಸಿದರು. ಇದರಲ್ಲಿ ಮಕ್ಕಳೇ ಅಂಗಡಿ ಮಾಲಿಕ ಮತ್ತು ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದರು. ಅಲ್ಲದೇ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಶಿಕ್ಷಣದ ಜೊತೆ ವ್ಯವಹಾರ ಜ್ಞಾನವನ್ನೂ ಪಡೆದುಕೊಂಡರು.

ಮಕ್ಕಳು ತಯಾರಿಸಿದ ರುಚಿಕರ ಆಹಾರ ಪದಾರ್ಥಗಳನ್ನು ಎಲ್ಲರೂ ಸವಿದರು. ಶಿಕ್ಷಕಿಯರಾದ ಆಯಿಷಾ ಎ, ಕು.ಸಂಶಿದ ಮತ್ತು ಆಯಿಷಾ ಪಿ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದರು. ಶಿಕ್ಷಕಿ ಕು.ಹರ್ಷಿತಾ ಲೆಕ್ಕಪರಿಶೋಧಕರಾಗಿ ಕಾರ್ಯ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಅರೇಬಿಕ್ ವಿಭಾಗದ ಮುಖ್ಯಸ್ಥರಾದ ರಶೀದ್ ಸಖಾಫಿ ಹಾಗೂ ಅಕಾಡೆಮಿಕ್ ಕೋ ಆರ್ಡಿನೇಟರ್ ಅರ್ಪಿತ ಹಾಗೂ ಎಲ್ಲಾ ಬೋದಕ ಮತ್ತು ಬೋಧಕೇತರ ವರ್ಗದವರು, ಪೋಷಕರು ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಂಶುಪಾಲ ರಂಝಿ ಮುಹಮ್ಮದ್ ಸ್ವಾಗತಿಸಿದರು. ಶಿಕ್ಷಕಿ ಕು.ಇಸ್ಫಾನ ಹಾಗೂ ಕು.ಅಫ್ರೀನ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here