ಪುತ್ತೂರು: ಕೃಷಿ ಇಲಾಖೆಯಲ್ಲಿ ಕೃಷಿ ಯಾಂತ್ರೀಕರಣ, ತುಂತುರು ನೀರಾವರಿ ಘಟಕ, ಪಿವಿಸಿ ಪೈಪ್ ಹಾಗೂ ಕೃಷಿ ಭಾಗ್ಯ ಯೋಜನೆಗಳಲ್ಲಿ ಸೌಲಭ್ಯಗಳನ್ನು ಪಡೆದುಕೊಳ್ಳಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೃಷಿಭಾಗ್ಯ ಯೋಜನೆಯಲ್ಲಿ 10ಮೀಟರ್ ಉದ್ದ, 10ಮೀಟರ್ ಅಗಲ, 3 ಆಳ, 12ಮೀ. ಉದ್ದ 12 ಅಗಲ 3 ಆಳ, 15 ಮೀ.ಉದ್ದ 15 ಅಗಲ 3 ಆಳ, 18 ಮೀ.ಉದ್ದ, 18 ಅಗಲ, 3ಆಳ ಹಾಗೂ 21ಮೀ. ಉದ್ದ 21 ಅಗಲ 3ಆಳದ ಕೃಷಿ ಹೊಂಡ ನಿರ್ಮಾಣಕ್ಕೆ ನಿಗದಿಪಡಿಸಿದ ಅಂದಾಜು ಪಟ್ಟಿಯಂತೆ ಸಾಮಾನ್ಯ ವರ್ಗ ಫಲಾನುಭವಿಗಳಿಗೆ ಶೇ.80 ಹಾಗೂ ಪ.ಜಾತಿ ಮತ್ತು ಪ.ಪಂಗಡದವರಿಗೆ ಶೇ.90 ಸಹಾಯಧನ ದೊರೆಯಲಿದೆ.
ಕೃಷಿ ಯಾಂತ್ರೀಕರಣ ಯೋಜನೆಯಲ್ಲಿ ಪವರ್ ಸ್ಪ್ರೇಯರ್, ಬ್ರಶ್ ಕಟ್ಟರ್, ಪವರ್ ವೀಡರ್, ಮೋಟೋಕಾರ್ಟ್, ಪವರ್ ಟಿಲ್ಲರ್ನ್ನು ವಿತರಿಸಲಾಗುತ್ತಿದ್ದು ಸಾಮಾನ್ಯ ವರ್ಗದವರಿಗೆ ಗರಿಷ್ಟ ಸಹಾಯಧನ ಎಲ್ಐಯಂತೆ ಶೇ.50 ಹಾಗೂ ಪ.ಜಾತಿ ಮತ್ತು ಪಂಗಡದವರಿಗೆ ಶೇ.90ರ ಸಹಾಯಧನದಲ್ಲಿ ವಿತರಿಸಲಾಗುವುದು.
ತುಂತುರು ನೀರಾವರಿ ಘಟಕ ಯೋಜನೆಯಲ್ಲಿ 5 ಸ್ಪ್ರಿಂಕ್ಲರ್ ಸೆಟ್ ಹಾಗೂ 30 ಕಪ್ಪು ಪೈಪುಗಳನ್ನು ಎಲ್ಲಾ ವರ್ಗದ ರೈತರಿಗೆ ಶೇ.90 ಸಹಾಯಧನದಲ್ಲಿ ವಿತರಿಸಲಾಗುವುದು. ಪ್ರತಿ ಹೆಕ್ಟೇರ್ಗೆ ಗರೀಷ್ಠ 35 ಪಿವಿಸಿ ಪೈಪ್ಗಳನ್ನು ಎಲ್ಲಾ ವರ್ಗದವರಿಗೂ ಶೇ.50ರ ಸಹಾಯಧನದಲ್ಲಿ ವಿತರಿಸಲಾಗುವುದು.
ಫಲಾನಿಭವಿಗಳು ತಮ್ಮ ಜಾಗದ ಪಹಣಿ, ಪಾಸ್ ಪೋರ್ಟ್ ಸೈಜ್ ಫೋಟೊ, ಬ್ಯಾಂಕ್ ಪಾಸ್ ಪುಸ್ತಕ ಮತ್ತು ಆಧಾರ್ ನಕಲು ಪ್ರತಿ, ಪ.ಜಾತಿ, ಪ.ಪಂಗಡದವರು ಜಾತಿ ಪ್ರಮಾಣ ಪತ್ರಗಳೊಂದಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಪುತ್ತೂರು ಇಲ್ಲಿಗೆ ಸಂಪರ್ಕಿಸುವಂತೆ ಸಹಾಯಕಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.