ನವ ದೆಹಲಿ : ಸಂಸತ್ತಿನ ಸ್ಥಾಯಿ ಸಮಿತಿಯ ಸಭೆ ಇಂದು ನಡೆಯಲಿದ್ದು, ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಂಬಂಧಿತ ಮಾಧ್ಯಮ ಕಾನೂನುಗಳ ಜಾರಿಗೆ ಕುರಿತಂತೆ ಸಭೆ ಪರಿಶೀಲನೆ ನಡೆಸಲಿದೆ. ಮಾಧ್ಯಮಕ್ಕೆ ಸಂಬಧಿಸಿದ ವಿವಿಧ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ.
ಬಿ.ಜೆ.ಪಿ ಸಂಸದ ನಿಶಿಕಾಂತ್ ದುಬೆ ನೇತೃತ್ವದ ಈ ಸಮಿತಿ ಹೆಚ್ಚುತಿರುವ ಕೋಟಾ [ನಕಲಿ, ಸುಳ್ಳು ] ಸುದ್ದಿ ಪಾವತಿ ಅಥವಾ ಪೈಡ್ ಸುದ್ದಿ ಮತ್ತು ಕೆಲವೊಂದು ಚಾನೆಲ್ಗಳಲ್ಲಿ ಪ್ರಸಾರವಾಗುತ್ತಿರುವ ಪ್ರಚೋದನಾತ್ಮಕ ಸುದ್ದಿ [ವಿಷಯಗಳ ಕುರಿತು ಚರ್ಚೆ ನಡೆಸಲಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಸಾಂಪ್ರದಾಯಿಕ ಮುದ್ರಣ ಮಾಧ್ಯಮ ಎದುರಿಸುತ್ತಿರುವ ಸವಾಲು ಮತ್ತು ಕರಗುತ್ತಿರುವ ಓದುಗರ ಸಂಖ್ಯೆ ಚರ್ಚೆಯ ಭಾಗವಾಗಲಿದೆ.
ಕ್ರೈಂ ಮತ್ತು ಸೆಲೆಬ್ರೆಟಿ ಸುದ್ದಿಗಳ ಮೇಲೆ ಹೆಚ್ಚುತ್ತಿರುವ ದಿಬ್ಬಂಧನ, ಟಿ ಆರ್ ಪಿ ಚಾಲಿತ ಸಂವೇದನಾಶೀಲ ವಿಷಯಗಳಿಗೆ ಪ್ರಾಮುಖ್ಯತೆ ನೀಡುತ್ತಿರುವ ಕೆಲವು ಚಾನೆಲ್ಗಳ ಬಗ್ಗೆಯು ಸಮಿತಿ ಚರ್ಚೆ ನಡೆಸಲಿದೆ.
ಪ್ರಚೋದನಾತ್ಮಕ ಮಾಧ್ಯಮ ನಿರೂಪಣೆಯು ಸಾರ್ವಜನಿಕ ಅಭಿಪ್ರಾಯದ ಮೇಲೆ ಬೀರುವ ಪರಿಣಾಮ ಮತ್ತು ಕಾನೂನು ಮಟ್ಟದ ಅಂಶಗಳ ಕುರಿತು ಸಮಿತಿ ಪರಿಶೀಲನೆ ನಡೆಸಬಹುದು ಎಂದು ತಿಳಿದು ಬಂದಿದೆ.
ರಾಜಕೀಯ ಅಸಹ್ಯತೆ ಮತ್ತು ಕೂಗಾಟಕ್ಕೆ ಸೀಮಿತವಾದ ಟಿವಿ ಚರ್ಚೆಗಳ ಗುಣಮಟ್ಟ ಕುಸಿಯುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ.