ಉಪ್ಪಿನಂಗಡಿ: ಇಲ್ಲಿನ ಪ್ರತಿಷ್ಠಿತ ಮೊಬೈಲ್ ಮಳಿಗೆ ‘ಶ್ರೀನಿಧಿ ಮೊಬೈಲ್ಸ್’ಗೆ ಈ ವರ್ಷ ದಕ್ಷಿಣ ಕನ್ನಡ ಮತ್ತು ಉಡುಪಿ ಮೊಬೈಲ್ ಅಸೋಶಿಯೇಶನ್‌ನಿಂದ ಹಮ್ಮಿಕೊಂಡಿದ್ದ ಸ್ಮಾರ್ಟ್ ಫೋನ್ ಫೆಸ್ಟ್ ಲಕ್ಕಿ ಕೂಪನ್‌ಗಳಲ್ಲಿ 4 ಬಹುಮಾನಗಳು ಬಂದಿದ್ದು, ಗ್ರಾಹಕರಿಗೆ ಸಂತಸ ತಂದಿವೆ.
ಈ ಯೋಜನೆಯಡಿ ಒಂದು ಸಾವಿರಕ್ಕಿಂತ ಹೆಚ್ಚಿನ ಪ್ರತಿ ಖರೀದಿಗೂ ಒಂದು ಉಚಿತ ಲಕ್ಕಿ ಕೂಪನ್ ನೀಡಲಾಗುತ್ತಿತ್ತು. ಉಪ್ಪಿನಂಗಡಿಯಲ್ಲಿ ಶ್ರೀನಿಧಿ ಮೊಬೈಲ್ಸ್‌ಗೆ ಮಾತ್ರ ಒಂದು ಟಿವಿ, ಎರಡು ಕುಕ್ಕರ್ ಹಾಗೂ ಒಂದು ಕೆಟಲ್ ಹೀಗೆ ನಾಲ್ಕು ಬಹುಮಾನಗಳು ಬಂದಿವೆ ಎಂದು ಸಂಸ್ಥೆಯ ಮಾಲಕ ಜಯಪ್ರಕಾಶ್ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.