ಪುತ್ತೂರು: ಕಡಬ ಸಮೀಪದ ಕರ್ಮಾಯಿಗುತ್ತು ದಿ.ಕೆ.ಕರಿಯಪ್ಪ ರೈಯವರ ಪತ್ನಿ ಆದೂರು ಏಳ್ನಾಡುಗುತ್ತು ಲಲಿತಾ ರೈ( 89 ವ) ರವರು ಜ. 31 ರಂದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪುತ್ರರಾದ ಕಾಂಗ್ರೆಸ್ ಮುಖಂಡ ವಿಜಯಕುಮಾರ್ ರೈ ಕರ್ಮಾಯಿ, ಮಾಜಿ ಸೈನಿಕ ಕೆ. ಸನತ್ ಕುಮಾರ್ ರೈ ಹಾಗೂ ಮಂಗಳೂರಿನ ನ್ಯಾಯವಾದಿ ಕೆ. ದಯಾನಂದ ರೈ ಹಾಗೂ ಇರ್ವರು ಪುತ್ರಿಯರನ್ನು ಅಗಲಿದ್ದಾರೆ.