ʼಧರ್ಮದ ಬಗ್ಗೆ ಭಾಷಣ ಮಾಡುತ್ತಾರೆ.ಸಮಾ ತಿಂದು ಹೋಗುತ್ತಾರೆ. ಇದು ಹಿಂದುತ್ವವಾʼ!!- ಶಾಸಕ ಅಶೋಕ್ ರೈ
ಪುತ್ತೂರು: ಭಾಷಣ ಮಾಡಿದರೆ ಹಿಂದೂ ಧರ್ಮ ಉದ್ಧಾರವಾಗಲು ಸಾಧ್ಯವಿಲ್ಲ, ನಮ್ಮ ಮಕ್ಕಳಿಗೆ ನಮ್ಮ ಧರ್ಮದ ಸಂಸ್ಕೃತಿ, ಆಚಾರ , ವಿಚಾರಗಳನ್ನು ಕಲಿಸುವ ಕೆಲಸವನ್ನು ನಾವು ಮಾಡಬೇಕು. ಜಗತ್ತಿನ ಯಾವ ಧರ್ಮವೂ ಹಿಂಸೆಯನ್ನು ಕಲಿಸುವುದಿಲ್ಲ. ರಾಜಕೀಯ ಕಾರಣಕ್ಕೋಸ್ಕರ ಸಮಾಜದಲ್ಲಿ ಧರ್ಮಗಳ ನಡುವೆ ಭಿನ್ನಗಳು ಹುಟ್ಟಿಕೊಳ್ಳುತ್ತದೆ. ರಾಜಕೀಯ ಲಾಭಕ್ಕೋಸ್ಕರ ವೇದಿಕೆ ಸಿಕ್ಕಾಗಲೆಲ್ಲಾ ಶಾಲು ಹಾಕಿ ಹಿಂದೂ ಧರ್ಮದ ಬಗ್ಗೆ , ಹಿಂದುತ್ವದ ಬಗ್ಗೆ ಕೆಲವರು ಭಾಷಣ ಮಾಡುತ್ತಾರೆ. ಬಳಿಕ ಹೊಕ್ಕಲು ಬಿರಿಯುವ ತನಕ ತಿಂದು ರಶೀದಿ ಕೂಡಾ ಮಾಡದೆ ತೆರಳುತ್ತಾರೆ ಇವರ ಹಿಂದುತ್ವ ಇಷ್ಟಕ್ಕೆ ಸೀಮಿತವಾಗಿದೆ ಎಂದು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಚಂದಳಿಕೆ ಕೇಸರಿ ಯುವ ಸಂಘಟನೆಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹಿಂದುತ್ವದ ಬಗ್ಗೆ ಭಾಷಣ ಮಾಡುವವರು ಎಷ್ಟು ದೇವಸ್ಥಾನ ಕಟ್ಟಿಸಿದ್ದಾರೆ? ಎಷ್ಟು ದೈವಸ್ಥಾನ ಜೀರ್ಣೋದ್ದಾರ ಮಾಡಿದ್ದಾರೆ? ಎಷ್ಟು ಹಿಂದೂ ಧಾರ್ಮಿಕ ಕಾರ್ಯಕ್ರಮದಲ್ಲಿ ಧನ ಸಹಾಯ ಮಾಡಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಹೇಳಿದ ಶಾಸಕರು ಶಾಲು ಹಾಕಿ ಮೈಕ ಸಿಕ್ಕಾಗ ಧರ್ಮದ ಬಗ್ಗೆ ಮಾತನಾಡಿದರೆ ಧರ್ಮ ಉದ್ದಾರವಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ಶಾಲೆ ಮತ್ತು ದೇವಸ್ಥಾನದಲ್ಲಿ ರಾಜಕೀಯ ಮಾಡಬಾರದು . ಈ ಎರಡು ಸ್ಥಳಗಳೂ ಪವಿತ್ರವಾದದ್ದು ಅಲ್ಲಿ ರಾಜಕೀಯ ಮಾಡಿದರೆ ಅವೆರಡು ಉದ್ದಾರವಾಗಲು ಸಾಧ್ಯವೇ ಇಲ್ಲ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ದೇವಸ್ಥಾನದ ಕಾರ್ಯಕ್ರಮದಲ್ಲಿ ಭಾಗವಹಿಸುವ ಹಿಂದುತ್ವ ಭಾಷಣಗಾರರು ಕಾರ್ಯಕ್ರಮದಲ್ಲಿ ರಶೀದಿ ಮಾಡಿ ನೆರವು ನೀಡುವಂತೆ ಶಾಸಕರು ಆಗ್ರಹಿಸಿದರು.