ಕಡಬ: ಮರ್ದಾಳ ಗ್ರಾ.ಪಂ.ನ 2025-2026ನೇ ಸಾಲಿನ ವಿಶೇಷ ಚೇತನರ ಸಮನ್ವಯ ಗ್ರಾಮಸಭೆ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.
ಗ್ರಾ.ಪಂ.ಅಧ್ಯಕ್ಷೆ ಪ್ರೇಮ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪೆರಾಬೆ ಗ್ರಾ.ಪಂ.ನ ವಿಆರ್ಡಬ್ಲ್ಯೂ ಮುತ್ತಪ್ಪರವರು ವಿಶೇಷಚೇತನರಿಗೆ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ, ಉಪಾಧ್ಯಕ್ಷರು, ಸದಸ್ಯರು, ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಭವಾನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆರೋಗ್ಯ ಇಲಾಖೆಯ ಅಧಿಕಾರಿ, ಆಶಾ ಕಾರ್ಯಕರ್ತೆ, ಬೆಥನಿಜೀವನ ಜ್ಯೋತಿ ವಿಶೇಷ ಶಾಲೆಯ ಮುಖ್ಯ ಶಿಕ್ಷಕರು, ಮಕ್ಕಳು, ಪೋಷಕರು, ಪಂಚಾಯತ್ ಸಿಬ್ಬಂದಿಗಳು, ಸಂಜೀವಿನಿಯ ಎಂಬಿಕೆ, ಎಲ್ಸಿಆರ್ಪಿ ಸಭೆಯಲ್ಲಿ ಉಪಸ್ಥಿತರಿದ್ದರು. ವಿಆರ್ಡಬ್ಲ್ಯೂ ಸಹಕರಿಸಿದರು.