ಪುತ್ತೂರು: ಖಾಸಗಿ ಕಾರ್ಯ ನಿಮಿತ್ತ ಯುಎಇ ಪ್ರವಾಸದಲ್ಲಿರುವ ಬಪ್ಪಳಿಗೆ ಗ್ಲೋಬಲ್ ಫ್ರೆಂಡ್ಸ್ ನ ಪ್ರಧಾನ ಕಾರ್ಯದರ್ಶಿ ಸಮೀರ್ ಎಸ್.ಎಸ್ ಅವರನ್ನು ಸಮಿತಿಯ ಸದಸ್ಯರು ಭೇಟಿಯಾಗಿ ಸನ್ಮಾನಿಸಿದರು.
ದುಬೈ ಕಾಸರಗೋಡು ಡೈನ್ ರೆಸ್ಟೋರೆಂಟ್ ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬಿಜಿಎಫ್ ಸಮಿತಿಯ ಅಧ್ಯಕ್ಷ ಇಸ್ಮಾಯಿಲ್ ನಝೀರ್ ಬಿಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಪ್ಪಳಿಗೆ ಗ್ಲೋಬಲ್ ಫ್ರೆಂಡ್ಸ್ ಬಿಜಿಎಫ್ ಹಾಗೂ ಬಪ್ಪಳಿಗೆ ಎನ್.ಆರ್.ಐ ಕಮಿಟಿಯ ಗೌರವ ಸಲಹೆಗಾರ ಅಬ್ದುಲ್ ಸಲಾಂ ಯು ಬಪ್ಪಳಿಗೆ ಸಮಾರಂಭವನ್ನು ಉದ್ಘಾಟಿಸಿದರು.
ಎನ್.ಆರ್.ಐ ಕಮಿಟಿ ಬಪ್ಪಳಿಗೆ ಇದರ ಅಧ್ಯಕ್ಷ ಅಬ್ದುಲ್ ಹಮೀದ್ ಕಮಾಂಡೋ ಹಾಗೂ ಸದಸ್ಯ ನಯಾಝ್ ಖಾನ್ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ಕಾರ್ಯಕ್ರಮದ ಮೊದಲಿ ಅಬ್ದುನ್ನಾಸಿರ್ ಯು ದುಆ ನೆರವೇರಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಮೀರ್ ಎಸ್ ಎಸ್ ಬಪ್ಪಳಿಗೆ ಹಾಗೂ ಆಸುಪಾಸಿನ ಜಮಾಅತಿನ ಸರ್ವಾಂಗೀಣ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಗ್ಲೋಬಲ್ ಫ್ರೆಂಡ್ಸ್ ಸಮಿತಿಯ ಸೇವೆಗಳನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು. ಅದೇ ರೀತಿ ಎನ್.ಆರ್.ಐ ಕಮಿಟಿಯು ಬಪ್ಪಳಿಗೆ ಮಸೀದಿಯಲ್ಲಿ ಕೈಗೊಂಡ ಯೋಜನೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿ, ಮಂದೆಯೂ ಎಲ್ಲರೂ ಒಗ್ಗೂಡಿ ಇನ್ನಷ್ಟು ಅಭಿವೃದ್ಧಿಗಾಗಿ ಪರಸ್ಪರ ಸಹಕರಿಸುವ ಎಂದು ಶುಭ ಹಾರೈಸಿದರು.
ಬೀಳ್ಕೊಡುಗೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಜಾಬಿರ್ ಯು ಅವರು ಎನ್.ಆರ್.ಐ ಕಮಿಟಿ ಮತ್ತು ಬಿಜಿಎಫ್ ಸಮಿತಿಗಳು ಪ್ರವಾಸ ಜೀವನದಲ್ಲಿ ಉತ್ತಮ ಮಾರ್ಗದರ್ಶನ ಹಾಗೂ ಒಳಿತುಗಳನ್ನು ನಿರ್ವಹಿಸಲು ಸಹಕರಿಸಿದೆ. ಬಿಜಿಎಫ್ ಹಾಗೂ ಎನ್.ಆರ್.ಐ ಕಮಿಟಿಯೊಂದಿಗೆ ನಾನು ಸದಾ ಸಹಕಾರ ನೀಡುತ್ತಾ ಮುಂದಕ್ಕೂ ಉತ್ತರೋತ್ತರ ಅಭಿವೃದ್ಧಿಯಾಗಲಿ ಎಂದು ಹಾರೈಸಿದರು.
ಮನ್ಸೂರ್ ಬಪ್ಪಳಿಗೆ, ಹಾರಿಸ್ ಪಿ.ಬಿ, ರಹ್ನಾಝ್ ಕರ್ಕುಂಜ ಮೊದಲಾದವರು ಉಪಸ್ಥಿತರಿದ್ದರು. ಜಾಬಿರ್ ಯು ಬಪ್ಪಳಿಗೆ ಸ್ವಾಗತಿಸಿ, ಶಂಸುದ್ದೀನ್ ಯುಎಮ್ ಧನ್ಯವಾದಗೈದರು.