ಪುತ್ತೂರು: ದರ್ಬೆಯ ಹನುಮಾನ್ವಾಡಿ ಪುಷ್ಪಾಂಜಲಿಯಲ್ಲಿ ಕಳೆದ 12 ವರ್ಷಗಳಿಂದ ಕಾರ್ಯನಿರ್ವಸುತ್ತಿರುವ, ಸೌಮ್ಯಾ ಆನಂದ್ ಭಟ್ ಮಾಲಕತ್ವದ ಕಾಮಾಕ್ಷಿ ಸ್ಟೀಲ್ಸ್ನ ನೂತನ, ವಿಸ್ತೃತ ಶೋರೂಮ್ ಫೆ.3ರಂದು ಶುಭಾರಂಭಗೊಂಡಿತು. ಮಾಲಕರ ಹೆತ್ತವರಾದ ವೆಂಕಟೇಶ್ ಭಟ್-ಉಷಾ ಭಟ್ ದಂಪತಿ ರಿಬ್ಬನ್ ಕತ್ತರಿಸಿ, ದೀಪಪ್ರಜ್ವಲನೆಗೈದು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಮಗ ಮತ್ತು ಸೊಸೆ ಇಬ್ಬರೂ ಬಹಳಷ್ಟು ಶ್ರಮಪಟ್ಟು ಉದ್ಯಮವನ್ನು ಬೆಳೆಸಿದ್ದಾರೆ. ಊರಿನವರಿಗೆ ಅನುಕೂಲ ಆಗಬೇಕೆಂದು ವೈವಿಧ್ಯಮಯ ಸ್ಟೀಲ್ ಉತ್ಪನ್ನಗಳನ್ನು ಇಲ್ಲಿ ಒದಗಿಸುವ ಕೆಲಸ ಮಾಡಿದ್ದಾರೆ. ಸಂಸ್ಥೆಯು ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಹರಸಿದರು.
ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ಮನೆಯೇ ಮಂತ್ರಾಲಯ ಎನ್ನುತ್ತಾರೆ. ಮನೆ ನಿರ್ಮಿಸುವಾಗ ಅವಶ್ಯಕತೆ ಇರುವ ಎಲ್ಲಾ ವಸ್ತುಗಳನ್ನು ಒಂದೇ ಸೂರಿನಡಿಯಲ್ಲಿ ಒದಗಿಸುವ ಕೆಲಸವನ್ನು ಆನಂದ್ ಭಟ್ ಅವರು ಮಾಡಿದ್ದಾರೆ. ಆಧುನಿಕ ಜೀವನಶೈಲಿಯಲ್ಲಿ ನವೀನ ವಿನ್ಯಾಸದ ಮನೆಗಳನ್ನು ನಿರ್ಮಿಸಲು ಅಗತ್ಯವಾದ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಾಸಗಳು ಆಗುತ್ತಿರುವ ಸಂದರ್ಭದಲ್ಲಿ ಎಲ್ಲವೂ ಒಂದೇ ಸೂರಿನಡಿ ದೊರೆಯುವಂತೆ ಮಾಡಿ ಹತ್ತಾರು ಅಂಗಡಿಗಳಿಗೆ ಅಲೆಯುವ ಪರದಾಟ ತಪ್ಪಿಸಿದ್ದಾರೆ. ವಿಶಾಲ ಪಾರ್ಕಿಂಗ್ ವ್ಯವಸ್ಥೆ ಹೊಂದಿರುವ ನೂತನ ಮಳಿಗೆಯು ಜನಾಕರ್ಷಣೆಯ ಕೇಂದ್ರವಾಗಿ ಮೂಡಿಬರಲಿದೆ ಎಂದು ಅಭಿಪ್ರಾಯಪಟ್ಟರು.
ಮಾಲಕರಾದ ಆನಂದ್ ಭಟ್ ಅವರ ಚಿಕ್ಕಪ್ಪ, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ್ ಪೈಯವರು ಮಾತನಾಡಿ, ವ್ಯಕ್ತಿತ್ವದಲ್ಲಿ ಪಾದರಸದಂತೆ ಇರುವವರು ಆನಂದ್ ಭಟ್ ಅವರು. ಯಾರೇ ಗ್ರಾಹಕರು ಬಂದರೂ ಅವರನ್ನು ನಗುಮುಖದಿಂದ ಸ್ವಾಗತಿಸಿ, ಅವರ ಬಜೆಟ್ಗೆ ಬೇಕಾದಂತೆ ವಸ್ತುಗಳನ್ನು ನೀಡುವುದರಲ್ಲಿ ನಿಸ್ಸೀಮರು. ಪುತ್ತೂರಿನ ಜನತೆಗೆ ಈ ವ್ಯವಸ್ಥೆ ಬಹಳ ಅನುಕೂಲ. ಇಂದಿನ ಮರದ ದರವನ್ನು ತುಲನೆ ಮಾಡಿದರೆ ಅದರ ಅರ್ಧಬೆಲೆಯಲ್ಲಿ ಈ ಡೋರ್ಗಳು ದೊರೆಯುತ್ತವೆ. ಕಳೆದ 10 ವರ್ಷಗಳಲ್ಲಿ ಸಂಸ್ಥೆಯು ಬಹಳಷ್ಟು ಪ್ರಸಿದ್ಧಿ ಪಡೆದಿದ್ದು, ಇಲ್ಲಿಂದ ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಮಂಗಳೂರು ಕಡೆಗಳಲ್ಲಿ ಶಾಖೆಗಳು ಕಾರ್ಯಾಚರಿಸುತ್ತಿವೆ. ಸಂಸ್ಥೆಯು ಇನ್ನಷ್ಟು ಪ್ರಸಿದ್ಧಿಯನ್ನು ಪಡೆಯಲಿ ಎಂದು ಹಾರೈಸಿದರು.
ಮಾಲಕರ ಇನ್ನೋರ್ವ ಚಿಕ್ಕಪ್ಪ ಡಾ.ಗೋಪಿನಾಥ್ ಪೈಯವರು ಮಾತನಾಡಿ, ಆನಂದ್ ಭಟ್ ಅವರು ಕಲಿತ ಪದವಿಗೆ ಪುತ್ತೂರು ಸಣ್ಣ ಊರಾದರೂ ಇಲ್ಲಿ ತಮ್ಮ ಉದ್ಯಮವನ್ನು ಆರಂಭಿಸಿದ್ದಾರೆ. ಹಗಲು, ರಾತ್ರಿ ಪರಿಶ್ರಮಪಟ್ಟು ಉದ್ಯಮ ಬೆಳೆಸಿದ್ದಾರೆ. ಮಿತದರದಲ್ಲಿ ಗುಣಮಟ್ಟದ ವಸ್ತುಗಳನ್ನು ನೀಡುತ್ತಿರುವ ಅವರ ಉದ್ಯಮ ಇನ್ನಷ್ಟು ಅಭಿವೃದ್ಧಿ ಕಾಣಲಿ ಎಂದು ಹಾರೈಸಿದರು.
ಹಿಮ ರೆಫ್ರಿಜರೇಷನ್ ಸಂಸ್ಥೆಯ ಮಾಲಕರಾದ ರಾಜೇಶ್ ಯು.ಪಿ. ಅವರು ಮಾತನಾಡಿ, ಆನಂದ್ ಅವರು ಬಹಳ ಶ್ರಮಜೀವಿ. ಬಾಲ್ಯದಿಂದಲೇ ಹೊಸತನ್ನು ಮಾಡಬೇಕೆನ್ನುವ ಹೊಸತನ. ವಿದೇಶಗಳಲ್ಲಿ ಕೆಲಸ ಮಾಡಿ ಅನುಭವ ಪಡೆದು ಬಂದು ಇಲ್ಲಿ ಉದ್ಯಮ ಆರಂಭಿಸಿದರು. ಈಗಾಗಲೇ ಯಶಸ್ಸು ಸಾಧಿಸಿದ್ದು, ಸಂಸ್ಥೆಯು ಇನ್ನಷ್ಟು ಭಾಗಗಳಲ್ಲಿ ವಿಸ್ತಾರಗೊಳ್ಳಲಿ ಎಂದು ಶುಭಹಾರೈಸಿದರು.
ನಾಯರ್ ಕನ್ಸ್ಟ್ರಕ್ಷನ್ಸ್ನ ಮಾಲಕ ಸೂರಜ್ ನಾಯರ್, ಕೃಷಿಕರಾದ ವಿಶ್ವೇಶ್ವರ ಭಟ್ ಬಂಗಾರಡ್ಕ, ಡಾ.ಭಾಸ್ಕರ್ ಎಸ್, ಮಾಸ್ಟರ್ ಪ್ಲಾನರಿ ಸಂಸ್ಥೆಯ ಮಾಲಕ ಎಸ್.ಕೆ. ಆನಂದ್, ಅಶ್ವಿನಿ ಹೋಟೆಲ್ ಮಾಲಕ ಕರುಣಾಕರ ರೈ, ಉದ್ಯಮಿ ಶಿವರಾಮ ಆಳ್ವ ಬಳ್ಳಮಜಲುಗುತ್ತು, ಡಾ.ಶಶಿಧರ್ ಕಜೆ, ಉದ್ಯಮಿ ಬೂಡಿಯಾರು ರಾಧಾಕೃಷ್ಣ ರೈ, ಬಿರುಮಲೆ ಬೆಟ್ಟ ಅಭಿವೃದ್ಧಿ ಯೋಜನೆಯ ಅಧ್ಯಕ್ಷ ಜಗಜೀವನ್ದಾಸ್ ರೈ, ಸತೀಶ್ ನಾಕ್ ಪರ್ಲಡ್ಕ, ಝಾಕೀರ್ ಹುಸೇನ್, ಈಶಾನ್ ನಾಯರ್, ಪ್ರಜ್ವಲ್ ರೈ, ಇಡ್ಕಿದು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನಮಜಲು, ಪುತ್ತೂರು ವರ್ತಕರ ಸಂಘದ ಮಾಜಿ ಅಧ್ಯಕ್ಷ ಜಾನ್ ಕುಟಿನ್ಹಾ, ನಟೇಶ ಉಡುಪ, ಫಾ. ಲಾರೆನ್ಸ್ ಗೊನ್ಸಾಲ್ವಿಸ್, ಸೀಝ್ಲರ್ನ ಪ್ರಸನ್ನ ಕುಮಾರ್ ಶೆಟ್ಟಿ ಮೊದಲಾದ ಗಣ್ಯರು ಭೇಟಿ ನೀಡಿ ಶುಭಹಾರೈಸಿದರು.
ಇದೇ ವೇಳೆ ಮಾಜಿ ಶಾಸಕ ಸಂಜೀವ ಮಠಂದೂರು ಅವರನ್ನು ಮಾಲಕರು ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿದರು. ಸಂಸ್ಥೆಯ ಮಾಲಕರಾದ ಸೌಮ್ಯಾ ಆನಂದ್ ಭಟ್ ದಂಪತಿ ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿದರು. ದಂಪತಿಯ ಪುತ್ರ ಅನ್ಮಯ್ ಭಟ್ ಹಾಗೂ ಸಿಬ್ಬಂದಿಗಳಾದ ಪವಿತ್ರ, ಅರ್ಪಿತಾ ಮತ್ತು ಸಂತೋಷ್ ಕುಮಾರ್ ಸಹಕರಿಸಿದರು.
ಕಾಮಾಕ್ಷಿ ಸ್ಟೀಲ್ಸ್ನಲ್ಲಿ, ಸುಮಾರು 3000 ಚದರಡಿಯ ವಿಸ್ತೃತ ಮಳಿಗೆಯಲ್ಲಿ ವೈವಿಧ್ಯಮಯ ರೆಸೆಡೆನ್ಶಿಯಲ್ ಡೋರ್ಗಳನ್ನು ಡಿಸ್ಪ್ಲೇ ಮಾಡಲಾಗಿದೆ. ಮನೆಯ ಮುಖ್ಯ ಬಾಗಿಲು, ಬೆಡ್ರೂಮ್ ಡೋರ್ಸ್, ಬಾಲ್ಕನಿ, ಸಿಟೌಟ್ಗಳಿಗೆ ಆಗುವಂತಹ ಬಾಗಿಲುಗಳಿವೆ. ಇವೆಲ್ಲವೂ ಸಂಪೂರ್ಣ ಸ್ಟೀಲ್ನದ್ದು. ಯಾವುದೇ ಮರ, ಫೈಬರ್ ಇಲ್ಲ. ಕಡಿಮೆ ವೆಚ್ಚ ದೀರ್ಘ ಬಾಳ್ವಿಕೆಯಿಂದ ಕೂಡಿದ ವಿದೇಶಿ ಉತ್ಪನ್ನಗಳು ಲಭ್ಯವಿದೆ. ಸ್ಟೀಲ್ ಡೋರ್ಗಳಲ್ಲಿ ಏಜಿಸ್, ಪೆಟ್ರಾ, ಹಾರ್ಮನ್, ಕ್ಯೂರಸ್ ಇತ್ಯಾದಿ ವಿದೇಶಿ ಕಂಪೆನಿಗಳ ಡೋರ್ಗಳು ಲಭ್ಯವಿದೆ. ಅತ್ಯಂತ ಬಲಿಷ್ಠವಾಗಿದ್ದು, ಕಡಿಮೆ ಅವಧಿಯಲ್ಲಿ ಸುಲಭವಾಗಿ ಜೋಡಣೆಯನ್ನೂ ಮಾಡಬಹುದು. ಜೊತೆಗೆ ಬರ್ಜರ್ ಪೈಂಟ್, ಸ್ಟೀಲ್ ಕಿಟಕಿಗಳು, ಹಾಸ್ಪಿಟಲ್ ಡೋರ್ಗಳು, ಸಿನೆಮಾ ಥಿಯೇಟರ್ ಮತ್ತು ಹೋಂ ಥಿಯೇಟರ್ ಡೋರ್ಗಳು, ಬೆಂಕಿ ನಿರೋಧಕ ಇಂಡಸ್ಟ್ರಿಯಲ್ ಡೋರ್ಗಳು, ಬೆಂಕಿ ನಿರೋಧಕ ಬಾಗಿಲುಗಳು ಲಭ್ಯವಿದೆ. ಗ್ರಾಹಕರಿಗೆ ಬೇಕಾದಂತೆ ಕಸ್ಟಮೈಸ್ ಮಾಡಿಕೊಡುವುದು ನಮ್ಮ ವಿಶೇಷ. ಗ್ರಾಹಕರಿಂದ ಅತ್ಯಂತ ಉತ್ತಮ ಸ್ಪಂದನೆ ದೊರೆತಿದ್ದು, ಮುಂದಕ್ಕೂ ಬೆಂಬಲ, ಪ್ರೋತ್ಸಾಹವನ್ನು ನಿರೀಕ್ಷಿಸುತ್ತೇವೆ.
ಆನಂದ್ ಭಟ್, ಮಾಲಕರು ಕಾಮಾಕ್ಷಿ ಸ್ಟೀಲ್ಸ್