
ಪುತ್ತೂರು: ಅನಾರೋಗ್ಯದಿಂದ ಬಳಲುತ್ತಿರುವ ಚಿಕ್ಕಮುಡ್ನೂರು ಗ್ರಾಮದ ಬಡಕಾಯಿದೆ ಮನೆಯ ಸೀತಾ ಅವರಿಗೆ ಅರುಣ ಸಾರಥಿ ಚಾಲಕರ ಸಂಘಟನೆಯ ವತಿಯಿಂದ 10,000 ರೂಪಾಯಿ ಧನಸಹಾಯವನ್ನು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರ ಉಪಸ್ಥಿತಿಯಲ್ಲಿ ಹಿಂದವಿ ಕಛೇರಿಯಲ್ಲಿ ನೀಡಲಾಯಿತು.
ಪ್ರತೀ ತಿಂಗಳಲ್ಲಿ ಅನಾರೋಗ್ಯದಲ್ಲಿರುವ ಅಸಕ್ತರಿಗೆ ರೂ.10,000ದಂತೆ 1,20,000 ರೂ.ಧನಸಹಾಯವನ್ನು ವಿತರಣೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಸಂಘಟನೆಯ ಸದಸ್ಯರಾದ ಸಂದೇಶ್ ನಾೖಕ್ ಕೆಯ್ಯೂರು, ಸಚಿನ್ ವಳತ್ತಡ್ಕ, ಸ್ವಸ್ತಿಕ್ ತಾರಿಗುಡ್ಡೆ, ಪ್ರವೀಣ್ ಕೆಮ್ಮಾಯಿ, ರೂಪೇಶ್ ನಾೖಕ್, ಎನ್.ಆರ್ ಇನ್ಶ್ಯೂರೆನ್ಸ್ ನ ಮಾಲಕ ನಿಶಾಂತ್ ರೈ, ತೀರ್ಥರಾಮ ಜಿಡೆಕಲ್ಲು, ಪ್ರದೀಪ್ ಶಗ್ರಿತ್ತಾಯ ಮೊದಲಾದವರು ಉಪಸ್ಥಿತರಿದ್ದರು.