ಸನ್ನಡತೆ, ಧೈರ್ಯ, ಜ್ಞಾನ ಸಂಪನ್ನತೆ ದೇಶದ ವಿಕಾಸಕ್ಕೆ ಕೈ ಜೋಡಿಸುವಂತಾಗಲಿ – ಜಯಪ್ರಕಾಶ್
ಪುತ್ತೂರು:ವಿವೇಕಾನಂದ ಕನ್ನಡ ಶಾಲಾ ಮಕ್ಕಳಿಗೆ ಭಾರತೀಯ ರಕ್ಷಣಾ ವಿಭಾಗ, ಯುದ್ಧ ವಿಮಾನಗಳ ತಯಾರಿ, ಇಸ್ರೋ ಸಂಸ್ಥೆಯ ಪರಿಚಯ ಕಾರ್ಯಕ್ರಮ ನಡೆಯಿತು.ಮೂಲತಃ ಪುತ್ತೂರಿನವರಾದ ಖ್ಯಾತ ಲೇಖಕ, ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನದ (LCA) ವಿನ್ಯಾಸ ಹಾಗೂ ಅಭಿವೃದ್ಧಿ ಕೇಂದ್ರದ ಪ್ರಧಾನ ಸಾರ್ವಜನಿಕ ಸಂಪರ್ಕಾಧಿಕಾರಿ, DRDO ಸಂಸ್ಥೆಯ ಪ್ರಾದೇಶಿಕ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ| ಕಲಾಂ ಅವರ ಸಮನ್ವಯಾಧಿಕಾರಿ 7 ವರ್ಷ ಕರ್ತವ್ಯ ನಿರ್ವಹಿಸಿ ತಮ್ಮ ಕಾರ್ಯನಿರ್ವಹಣೆಗಾಗಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದ ಪ್ರಸ್ತುತ ಮೈಸೂರಿನಲ್ಲಿ ವಾಸವಾಗಿರುವ ಜಯಪ್ರಕಾಶ್ ಅವರು ಭಾರತೀಯ ರಕ್ಷಣಾ ವಿಭಾಗ, ಯುದ್ಧ ವಿಮಾನಗಳ ತಯಾರಿ, ಇಸ್ರೋ ಸಂಸ್ಥೆಯ ಪರಿಚಯ ತಿಳಿಸುತ್ತಾ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜೀವನ ಮತ್ತು ರಾಷ್ಟ್ರಪ್ರೇಮದ ಬಗ್ಗೆ ವಿಡಿಯೋ ಪ್ರಾತ್ಯಕ್ಷಿಕೆ ನೀಡಿದರು.
ಶಾಲಾ ಆಡಳಿತ ಮಂಡಳಿ ಸಂಚಾಲಕರಾದ ವಸಂತ ಸುವರ್ಣ ಉಪಸ್ಥಿತರಿದ್ದರು. ಶಾಲಾ ಮುಖ್ಯಗುರುಗಳಾದ ಆಶಾ ಬೆಳ್ಳಾರೆ ಅಭ್ಯಾಗತರ ಸ್ವಾಗತ ಪರಿಚಯ ಮಾಡಿದರು. ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು.