ಕೌಡಿಚ್ಚಾರ್:ಬಡಗನ್ನೂರು ಗ್ರಾಮದ ಕೆಳಗಿನ ಪೇರಾಲು ದಿ.ಸಂಕಪ್ಪ ರೈಯವರ ಪುತ್ರ, ಕಳೆದ ಹಲವು ವರ್ಷಗಳಿಂದ ಅರಿಯಡ್ಕ ಗ್ರಾಮದ ಕೌಡಿಚ್ಚಾರ್ನಲ್ಲಿ ಹೋಟೆಲ್ ವ್ಯವಹಾರ ನಡೆಸಿಕೊಂಡಿದ್ದ ಸದಾಶಿವ ರೈ(೬೦ವ.)ಅವರು ದಿಢೀರ್ ಅಸ್ವಸ್ಥರಾಗಿ ಫೆ.೪ರಂದು ರಾತ್ರಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪ್ರಗತಿಪರ ಕೃಷಿಕರೂ ಆಗಿದ್ದ ಇವರು ಹಲವು ವರ್ಷಗಳ ಕಾಲ ಕೌಡಿಚ್ಚಾರ್ ಪೇಟೆಯಲ್ಲಿ ‘ಹೋಟೇಲ್ ಹರ್ಷಿತಾ’ವನ್ನು ನಡೆಸಿಕೊಂಡಿದ್ದು ಚಿರಪರಿಚಿತರಾಗಿದ್ದರು.ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಹೊಟೇಲ್ ವ್ಯವಹಾರ ಸ್ಥಗಿತಗೊಳಿಸಿ ವಿಶ್ರಾಂತಿಯಲ್ಲಿದ್ದರು.ಮೃತರು ಪತ್ನಿ ಸತ್ಯಾವತಿ ರೈ, ಪುತ್ರಿ ರೇಖಾ ರೈ, ಅಳಿಯ ಸಚಿತ್ ರೈ,ಸಹೋದರರಾದ ರಘುರಾಮ ರೈ, ರವಿರಾಜ ರೈ, ಈಶ್ವರಮಂಗಲದಲ್ಲಿ ಬೇಕರಿ ಹೊಂದಿರುವ ಪ್ರಭಾಕರ ರೈ, ಸಹೋದರಿಯರಾದ ವೇದಾವತಿ ರೈ, ರಾಜೀವಿ ರೈ, ಪ್ರೇಮಾರಾಧಾಕೃಷ್ಣ ರೈ ಚಾವಡಿ,ನಳಿನಿ ರೈ ಅವರನ್ನು ಅಗಲಿದ್ದಾರೆ.
ಫೆ.೫ರಂದು ಅಂತ್ಯಕ್ರಿಯೆ:
ಮೃತರ ಅಂತ್ಯಕ್ರಿಯೆಯನ್ನು ಫೆ.೫ರಂದು ಬೆಳಿಗ್ಗೆ ಪೇರಾಲು ಮನೆಯಲ್ಲಿ ನಡೆಸಲಾಗುವುದು ಎಂದು ಮೃತರ ಸಹೋದರ ಪ್ರಭಾಕರ ರೈ ತಿಳಿಸಿದ್ದಾರೆ.