ಇಂದಿನ ಕಾರ್ಯಕ್ರಮ (05/02/2025)

0

ಕೊಣಾಲು ಗ್ರಾಮದ ತಿರ್ಲೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬೆಳಿಗ್ಗೆ ೯ರಿಂದ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಹೊರೆಕಾಣಿಕೆ ಸಮರ್ಪಣೆ, ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ೪ರಿಂದ ಭಜನೆ, ೫.೩೦ರಿಂದ ಕ್ಷೇತ್ರದ ತಂತ್ರಿಗಳಿಗೆ, ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ, ರಕ್ಷೆಘ್ನ ಹೋಮ, ವಾಸ್ತು ಹೋಮ, ೬.೩೦ಕ್ಕೆ ಸಭಾ ಕಾರ್ಯಕ್ರಮ, ರಾತ್ರಿ ೯ರಿಂದ “ನಗಬೇಕು ಆಗಾಗ ಬದುಕಿನೊಳಗೆ” ಸಂಗೀತ ಹಾಸ್ಯ ಲಹರಿ
ಕೋಡಿಂಬಾಡಿ ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೯ಕ್ಕೆ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ, ಅಪರಾಹ್ನ ೨.೩೦ರಿಂದ ಶೈಕ್ಷಣಿಕ ಕಾರ್ಯಕ್ರಮ, ಸಂಜೆ ೬.೩೦ರಿಂದ ಸಾರ್ವಜನಿಕ ಸಭಾ ಕಾರ್ಯಕ್ರಮ
ಇರ್ದೆ ಪೂಮಾಣಿ -ಕಿನ್ನಿಮಾಣಿ, ರಾಜನ್ ದೈವಗಳ ಕದಿಕೆ ಚಾವಡಿಯಲ್ಲಿ ಬೆಳಿಗ್ಗೆ ೯ರಿಂದ ಪೂಮಾಣಿ ದೈವದ ನೇಮ
ಕೊಯಿಲ ಗ್ರ್ರಾಮದ ಕೊನೆಮಜಲುಗುತ್ತು ಶ್ರೀ ದೇವಿ ಉಳ್ಳಾಲ್ತಿ ಉಳ್ಳಾಕುಲು, ಸಪರಿವಾರ ದೈವಗಳ ದೈವಸ್ಥಾನದಲ್ಲಿ ಶ್ರೀ ದೈವಗಳ ೧೨ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ
ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ಮಠದಲ್ಲಿ ಬೆಳಿಗ್ಗೆ ೮.೩೦ರಿಂದ ಬಾಗಿಲು ತೆರೆಯುವ ಮುಹೂರ್ತ, ಸಂಪ್ರೋಕ್ಷಣೆ, ಮಹಾಪೂಜೆ, ಅನ್ನಸಂತರ್ಪಣೆ, ಅಪರಾಹ್ನ ೩ಕ್ಕೆ ವೈದಿಕ ಮಂತ್ರಾಕ್ಷತೆ, ಸಂಜೆ ೫ರಿಂದ ಧೂಮಾವತಿ, ಗುಳಿಗ ದೈವಗಳ ತಂಬಿಲ ಸೇವೆ, ಭಂಡಾರ ತೆಗೆಯುವುದು, ನೇಮೋತ್ಸವ
ಬಿಳಿನೆಲೆ ಗ್ರಾ.ಪಂ ಕಚೇರಿ ಸಭಾಭವನದಲ್ಲಿ ಬೆಳಿಗ್ಗೆ ೧೦ರಿಂದ ಮಕ್ಕಳ, ಮಹಿಳಾ, ವಿಶೇಷಚೇತನರ ಗ್ರಾಮಸಭೆ
ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಬೆಳಿಗ್ಗೆ ೧೧.೩೦ಕ್ಕೆ ಶ್ರೀ ದೈವದ ನೇಮಕ್ಕೆ ಆಗಿನದ ಕುದಿ ಇಡುವುದು
ಸರ್ವೆ ಗ್ರಾಮದ ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬೆಳಿಗ್ಗೆ ೧೦ಕ್ಕೆ ಹಸಿರು ಹೊರೆಕಾಣಿಕೆ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ೧.೩೦ಕ್ಕೆ ಅನ್ನಸಂತರ್ಪಣೆ
ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆಯ ಪ್ರಯುಕ್ತ ರಾತ್ರಿ ಭಂಡಾರಯೇರುವುದು
ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಪಿಲಿಪ್ಪೆ ವಿಷ್ಣುನಗರದಲ್ಲಿ ಬೆಳಿಗ್ಗೆ ೭.೩೦ಕ್ಕೆ ಜಾತ್ರೋತ್ಸವದ ಗೊನೆ ಕಡಿಯುವುದು

LEAVE A REPLY

Please enter your comment!
Please enter your name here