ದೇವಳದ ಜಾಗದಲ್ಲಿ ಮನೆ ಧ್ವಂಸ – ಗೂಂಡಾಗಳನ್ನು ಬಂಧಿಸದಿದ್ದರೆ ಬಿಜೆಪಿಯಿಂದ ಪ್ರತಿಭಟನೆ – ನಳಿನ್

0

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾಗದಲ್ಲಿ ರಾಜೇಶ್ ಬನ್ನೂರು ವಾಸ್ತವ್ಯವಿದ್ದ ಮನೆಯನ್ನು ಧ್ವಂಸ ಮಾಡಿದ ವಿಚಾರಕ್ಕೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲು ಮಾಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದೇವೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.


ರಾಜೇಶ್ ಬನ್ನೂರು ಅವರನ್ನು ಕಟ್ಟಿ ಹಾಕಿ ಮನೆ ದ್ವಂಸ ಮಾಡಿದ ಗೂಂಡಾಗಳನ್ನು ಬಂಧಿಸಬೇಕು ಮತ್ತು ಕೃತ್ಯಕ್ಕೆ ಬಳಸಿದ ಜೆಸಿಬಿಗಳನ್ನು ವಶಕ್ಕೆ ಪಡೆಯಬೇಕೆಂದು ನಾವು ಆಗ್ರಹಿಸಿದ್ದೆವೆ. ಎರಡು ದಿನದಲ್ಲಿ ಗೂಂಡಾಗಳನ್ನು ಬಂದಿಸದಿದ್ದಲ್ಲಿ ಬಿಜೆಪಿ ಪ್ರತಿಭಟನೆ ಮಾಡಲಿದೆ ಎಂದವರು ತಿಳಿಸಿದ್ದಾರೆ.

https://youtu.be/QIvLWpPsysk

LEAVE A REPLY

Please enter your comment!
Please enter your name here