ಪುತ್ತೂರು:ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಎರಡು ವಿದ್ಯುತ್ ಕಂಬ ಮುರಿದುಬಿದ್ದ ಘಟನೆ ನರಿಮೊಗರು ಶಾಲಾ ಬಳಿ ಇಂದು ನಡೆದಿದೆ.
ಟ್ರ್ಯಾಕ್ಟರ್ ಗಡಿಪಿಲದಿಂದ ಪುರುಷರಕಟ್ಟೆಗೆ ತೆರಳುತ್ತಿದ್ದ ಸಂದರ್ಭ ಪಲ್ಟಿಯಾಗಿದೆ.ಗಡಿಪಿಲ ಬಳಿ ಮೇಲ್ಸೆತುವೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಗೆ ನೀರು ಕೊಂಡೊಯ್ಯುತ್ತಿದ್ದ ಸಂದರ್ಬದಲ್ಲಿ ಪಲ್ಟಿಯಾಗಿದೆ.
ಅದೃಷ್ಟವಶಾತ್ ಅಪಘಾತದಿಂದ ಯಾರಿಗೂ ಯಾವುದೇ ಗಾಯಗಳಾಗಿಲ್ಲ.