ಮನೆ ಧ್ವಂಸ ಪ್ರಕರಣ: ಪೊಲೀಸರಿಂದ ಸ್ಥಳ ಮಹಜರು

0

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾಗದಲ್ಲಿ ರಾಜೇಶ್ ಬನ್ನೂರು ವಾಸ್ತವ್ಯವಿದ್ದ ಮನೆಯನ್ನು ದ್ವಂಸ ಮಾಡಿದ ವಿಚಾರಕ್ಕೆ ಸಂಬಂಧಿಸಿ ಆರೋಪ, ಪ್ರತ್ಯಾರೋಪಗಳು ಬಂದಿದ್ದು, ಎರಡು ಪ್ರಕರಣಗಳು ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ. ಆ ಸಲುವಾಗಿ ಪುತ್ತೂರು ನಗರ ಠಾಣೆಯ ಪೊಲೀಸರು ಧ್ವಂಸವಾದ ಮನೆಯ ಸ್ಥಳಕ್ಕೆ ತೆರಳಿ ಮಹಜರು ನಡೆಸಿ ಮಾಹಿತಿ ಕಲೆಹಾಕಿದರು.ಈ ಸಂದರ್ಭದಲ್ಲಿ ಚಿನ್ನ, ಮೊಬೈಲ್‌, ನಗದು ಸಿಕ್ಕಿದೆ ಎಂದು ಮಾಹಿತಿ ಲಭ್ಯವಾಗಿದೆ.

ಈಗಾಗಲೇ ರಾಜೇಶ್‌ ಬನ್ನೂರು ಅವರು ನೀಡಿದ ದೂರಿನನ್ವಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ್ ಭಟ್‌ ಸೇರಿದಂತೆ 15 ಜನರ ಮೇಲೆ ಪ್ರಕರಣ ದಾಖಲಾಗಿದ್ದರೆ. ಇತ್ತ ದೇವಸ್ಥಾನದ ಎಕ್ಸಿಕ್ಯೂಟಿವ್‌ ಆಫೀಸರ್‌ ಕೆ.ವಿ ಶ್ರೀನಿವಾಸ್‌ ಅವರು ನೀಡಿದ ದೂರಿನಂತೆ ರಾಜೇಶ್‌ ಬನ್ನೂರು ಸೇರಿದಂತೆ 9 ಮಂದಿಯ ಮೇಲೆ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here