ಪುಣಚ: ಪುಣಚ ಗ್ರಾಮದ ಬಳಂತಿಮೊಗರು ನಿವಾಸಿ ಇಂಜಿನಿಯರ್ ಗೋವಿಂದರಾಜ್ (60.ವ) ರವರು ಅಸೌಖ್ಯದಿಂದ ಫೆ.7ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಸುಮಾರು 40 ವರ್ಷಗಳಿಂದ ವಿವಿಧ ಕಡೆಗಳಲ್ಲಿ ಇಂಜಿನಿಯರ್ ಕೆಲಸ ನಿರ್ವಹಿಸುತ್ತಿದ್ದು ಚಿರಪರಿಚಿತರಾಗಿದ್ದರು. ಮೃತರು ತಾಯಿ ಮೀನಾಕ್ಷಿ, ಪತ್ನಿ ಸುಮಂಗಲಾ, ಅತ್ತೆ, ಮಾವ, ಸಹೋದರಿ, ಸಹೋದರರನ್ನು ಅಗಲಿದ್ದಾರೆ.