ಬಂಟ್ವಾಳ ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿಧ್ದೋದ್ದೇಶ ಸಹಕಾರ ಸಂಘ ನಿ. (ಲ್ಯಾಂಪ್ಸ್) ಅಧ್ಯಕ್ಷರಾಗಿ ಸುಂದರ ನಾಯ್ಕ ಇರ್ವತ್ತೂರು, ಉಪಾಧ್ಯಕ್ಷರಾಗಿ ರಮೇಶ ನಾಯ್ಕ ತೋಟ ಬಿಳಿಯೂರು ಆಯ್ಕೆ

0

ವಿಟ್ಲ: ಬಂಟ್ವಾಳ ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿಧ್ದೋದ್ದೇಶ ಸಹಕಾರ ಸಂಘ ನಿ. (ಲ್ಯಾಂಪ್ಸ್) ಬಂಟ್ವಾಳ ಇದರ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳನ್ನು ಪಡೆದು ಸತತ 3 ನೇ ಬಾರಿಗೆ ಅಧ್ಯಕ್ಷರಾಗಿ ಸುಂದರ ನಾಯ್ಕ ಇರ್ವತ್ತೂರು ಹಾಗೂ ಉಪಾಧ್ಯಕ್ಷರಾಗಿ ರಮೇಶ ನಾಯ್ಕ ತೋಟ ಬಿಳಿಯೂರು ಅವರು ಆಯ್ಕೆಯಾಗಿದ್ದಾರೆ.

ನಿರ್ದೇಶಕರುಗಳಾಗಿ ಪಿ. ಕೇಶವ ನಾಯ್ಕ ಕೇಪು, ನಾಗಮ್ಮ ನರಿಕೊಂಬು, ಪ್ರೇಮ ಕೇಪು, ಸುಂದರ ನಾಯ್ಕ ಆಲಂಪುರಿ, ದಿನೇಶ್ ನಾಯ್ಕ ಕಾಂಜಿರಕೋಡಿ, ಪುಷಾ ಪೆರ್ನೆ, ನಾರಾಯಣ ನಾಯ್ಕ ಸಂಚಯಗಿರಿ, ಜಯರಾಮ ನಾಯ್ಕ ನಗ್ರಿ, ಸತೀಶ್ ನಾಯ್ಕು ಕೊಲ್ನಾಡು, ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಪ್ರಥಮ ದರ್ಜೆ ಸಹಾಯಕ ನವೀನ್ ಕುಮಾರ್ ಎಂ. ಎಸ್ ಚುನಾವಣಾಧಿಕಾರಿಯಾಗಿದ್ದು, ಆಯ್ಕೆ ಪ್ರಕ್ರಿಯೆ ನೆರವೇರಿಸಿದರು.ವಿಲಾಸ್ ಪರಿಶೀಲನಾಧಿಕಾರಿಯಾಗಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರ್ಚನಾ ಸಾಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here