ಪುತ್ತೂರು: ಅಕ್ರಮ ಗೋ ಸಾಗಾಟದ ಆರೋಪದಡಿಯಲ್ಲಿ ದಾರಂದಕುಕ್ಕುವಿನಲ್ಲಿ, ಪಿಕಪ್ ವಾಹನವೊಂದನ್ನು ತಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ಫೆ.8ರಂದು ನಡೆದ ಬಗ್ಗೆ ವರದಿಯಾಗಿದೆ.
ಬಲ್ನಾಡುವಿನಿಂದ ಗುರುವಾಯನಕೆರೆಗೆ, ಅನುಮತಿ ಪಡೆದು ಗೋ ಸಾಗಾಟ ಮಾಡಲಾಗುತ್ತಿತ್ತು. ಆದರೆ ಒಂದು ಗೋವಿನ ಸಾಗಾಟಕ್ಕೆ ಅನುಮತಿ ಪಡೆದು ಹೆಚ್ಚುವರಿ ಗೊವುಗಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು ಎಂದು ಆರೋಪಿಸಿ ದಾರಂದಕುಕ್ಕುವಿನಲ್ಲಿ ವಾಹನ ತಡೆಯಲಾಗಿತ್ತು. ಗೋವು ಸಾಗಾಟದ ವಾಹನವನ್ನು ಪೊಲೀಸರು ಠಾಣೆಗೆ ಕೊಂಡೊಯ್ದಿದ್ದಾರೆ.