ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಮನರಂಜಿಸಿದ “ಕೈಟ್ ಡೇ” :ಗಾಳಿಪಟ ಬಾನೆತ್ತರಕ್ಕೆ ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ

0

ಕಾಣಿಯೂರು: ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಪ್ರೀಕೆಜಿ, ಎಲ್ ಕೆ ಜಿ, ಯುಕೆಜಿ ಪುಟಾಣಿಗಳಿಂದ “ಕೈಟ್ ಡೇ” ವಿಭಿನ್ನ ಕಾರ್ಯಕ್ರಮವನ್ನು ಆಚರಿಸಲಾಯಿತು.

ಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿಯವರು ಅನೇಕ ಬಲೂನುಗಳನ್ನು ಒಳಗೊಂಡ ಗಾಳಿಪಟವನ್ನು ಬಾನೆತ್ತರಕ್ಕೆ ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ, ಶಾಲಾ ಆಡಳಿತ ಅಧಿಕಾರಿ ವಸಂತ ರೈ ಕಾರ್ಕಳ ಶಾಲೆಯ ಮೊದಲ ಮಹಡಿಯಿಂದ “ಕೈಟ್ ಡೇ” ಬ್ಯಾನರನ್ನು ಕೆಳಗಿಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಂಸ್ಥೆಯ ಎಲ್ಲಾ ಪುಟಾಣಿಗಳು ತಮ್ಮ ತಮ್ಮ ಮನೆಯಲ್ಲಿ ಬಣ್ಣ ಬಣ್ಣದ ಗಾಳಿಪಟವನ್ನು ತಯಾರಿಸಿ ತಂದು ಸಂಸ್ಥೆಯ ಅಂಗಳದಲ್ಲಿ ಹಾರಿಸಿ ಸಂಭ್ರಮಿಸಿದರು. ಶಿಕ್ಷಕಿಯರಾದ ಸವಿತಾ ಕೆ, ಸುಚೇತ, ರಚನಾ, ರೇವತಿ, ಶೃತಿ, ಪ್ರತಿಭಾ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸುವಲ್ಲಿ ಸಫಲರಾದರು. ಮುಖ್ಯ ಗುರುಗಳು ಮತ್ತು ಎಲ್ಲಾ ಶಿಕ್ಷಕ-ಶಿಕ್ಷಕೇತರ ವೃಂದದವರು ಕಾರ್ಯಕ್ರಮದಲ್ಲಿ ಕೈಜೋಡಿಸಿ ಸಂಭ್ರಮಿಸಿದರು. ಪೋಷಕ ಬಂಧು ಸುನಿಲ್ ಕುಮಾರ್ ರೈ ಪೆರುವಾಜೆ ಸಹಕಾರ ನೀಡಿದರು.

LEAVE A REPLY

Please enter your comment!
Please enter your name here