ನೆಲ್ಯಾಡಿ: ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಕಡವೆಯೊಂದರ ಕಾಲು ಮುರಿತವಾದ ಘಟನೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಕರ್ಬಸಂಕದ ಬಳಿ ಫೆ.9ರಂದು ಬೆಳಿಗ್ಗೆ ನಡೆದಿದೆ.
ಕಡವೆ ಹೆದ್ದಾರಿ ಬದಿಯಲ್ಲಿ ಬಿದ್ದುಕೊಂಡಿತ್ತು. ಡಿಕ್ಕಿಯಾದ ವಾಹನ ಪರಾರಿಯಾಗಿತ್ತು. ಕಡವೆಯನ್ನು ಕಡಬ ಪಶು ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ನೀಡಲಾಗಿದೆ ಎಂದು ವರದಿಯಾಗಿದೆ.