ಫ್ರೀ ಹೋಮ್ ಡೆಲಿವೆರಿ
ಪುತ್ತೂರು: ನಗರದ ಜಿಎಲ್ ಕಾಂಪ್ಲೆಕ್ಸ್‌ನಲ್ಲಿ ಕೆಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಲಜೀಜ್ಹ್ ಪಿಜ್ಜಾ ಔಟ್‌ಲೆಟ್ ಬೊಳುವಾರಿನ ಐಲ್ಯಾಂಡ್ ಮಯೂರ ಸಮೀಪದ ನೀಕ್ಷಾ ಆರ್ಕೇಡ್ ಕಟ್ಟಡಕ್ಕೆ ಸ್ಥಳಾಂತರಗೊಂಡು ಫೆಬ್ರವರಿ 10 ರಂದು ಪೂಜಾ ವಿಧಿವಿಧಾನಗಳೊಂದಿಗೆ ಶುಭಾರಂಭಗೊಂಡಿದ್ದು, ನಗರ ವ್ಯಾಪ್ತಿಯ ಗ್ರಾಹಕರಿಗೆ ಹೋಮ್ ಡೆಲಿವೆರಿ ಉಚಿತವಾಗಿದೆ.
ಔಟ್‌ಲೆಟ್ ಶುಭಾರಂಭದ ವೇಳೆ ಮಾಲಕ ಶಶಿಕಾಂತ್ ಸಾಲಿಯಾನ್, ಇವರ ಪತ್ನಿ ದಿವ್ಯಾ ಕುಲಾಲ್, ಸಹೋದರ ಸಂತೋಷ್ ಸಾಲಿಯಾನ್, ಪುತ್ರಿ ಶ್ರೀನಿಧಿ ಸಾಲಿಯಾನ್, ಮಾವ ಸುಂದರ್ ಬಂಗೇರ, ಅತ್ತೆ ಕಸ್ತೂರಿ, ಸಿಬ್ಬಂದಿ ಲಾವಣ್ಯ, ಶೀಲಾವತಿ, ನಾಗರಾಜ್, ಕೋಮಲ್ ಹಾಗೂ ವಸಂತ್ ಉಪಸ್ಥಿತರಿದ್ದರು.
ದೇಶಾದ್ಯಂತ 200 ಸ್ಟೋರ್‌ಗಳನ್ನು ಹೊಂದಿರುವ ಲಜೀಜ್ಹ್ ಪಿಜ್ಜಾ ಔಟ್‌ಲೆಟ್‌ನಲ್ಲಿ ಪಿಜ್ಜಾ, ಬರ್ಗರ್, ಪಾಸ್ತ ಇತ್ಯಾದಿ ಫುಡ್‌ಗಳು ಗ್ರಾಹಕರಿಗೆ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು 8451007999 ಸಂಖ್ಯೆಗೆ ದೂರವಾಣಿ ಕರೆ ಮಾಡಬಹುದು.