ಪುತ್ತೂರು: ಬಿರುಮಲೆ ಬೆಟ್ಟ ಅಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಫೆ.2ರಂದು ನಡೆದ ಬಿರುಮಲೋತ್ಸವ-2025 ಕಾರ್ಯಕ್ರಮದ ಅಂಗವಾಗಿ ನಡೆಸಿದ ಶಾರ್ಟ್ ವೀಡಿಯೋ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಯಿತು.
ಬಿರುಮಲೋತ್ಸವ ಕಾರ್ಯಕ್ರಮದ ಒಟ್ಟು ಹೈಲೈಟ್ ವೀಡಿಯೋವನ್ನು ಆಕರ್ಷಕ ರೀತಿಯಲ್ಲಿ ಒಂದು ನಿಮಿಷ(ಶಾರ್ಟ್ ವೀಡಿಯೋ)ಕ್ಕೆ ಮೀರದಂತೆ ಕ್ರಿಯೇಟಿವ್ ಆಗಿ ಪ್ರಸ್ತುತ ಪಡಿಸುವ ವಿಶೇಷ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಆರ್ಯನ್ ಆರ್. ಪುತ್ತೂರು ಪ್ರಥಮ, ಪ್ರಜ್ವಲ್ ಆಚಾರ್ಯ ದ್ವಿತೀಯ ಬಹುಮಾನ ಪಡೆದರು.
ಶೇಷಕೃಷ್ಣ, ದಿಶಾ, ಚೇತನ್ ಹಾಗೂ ಚಿಂತನ್ರವರ 4 ಉತ್ತಮ ವೀಡಿಯೋ ಆಯ್ಕೆ ಮಾಡಲಾಗಿತ್ತು. ಫೆ.9ರಂದು ಬಿರುಮಲೆ ಬೆಟ್ಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು. ಬಿರುಮಲೆ ಬೆಟ್ಟ ಅಭಿವೃದ್ಧಿ ಯೋಜನೆಯ ಉಪಾಧ್ಯಕ್ಷ ಝೇವಿಯರ್ ಡಿಸೋಜ, ಕೋಶಾಧಿಕಾರಿ ಪ್ರೊ.ದತ್ತಾತ್ರೇಯ, ಗಾಳಿಪಟ ಸ್ಪರ್ಧೆಯ ಆಯೋಜಕರಾದ ಪೊರ್ಲು ಈವೆಂಟ್ಸ್ನ ಸಂತೋಷ್ ಭಂಡಾರಿ ಚಿಲ್ಮೆತ್ತಾರು ಮತ್ತು ಶಶಿರಾಜ್ ರೈ ಮಾರ್ಕ್ ಟೆಲಿಕಾಂ, ಸಂತೋಷ್ ಶೆಟ್ಟಿ ಸಾಜ, ತೀರ್ಪುಗಾರರಾದ ಲಯನ್ಸ್ ಗಣೇಶ್ ಶೆಟ್ಟಿ, ಲಯನ್ಸ್ ಪುತ್ತೂರ್ದ ಮುತ್ತು ರವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.