ಫೆ.12,13: ಕೈಪಂಗಳ ಬಾರಿಕೆಯಲ್ಲಿ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ

0

ಪುತ್ತೂರು: ಶ್ರೀ ಬ್ರಹ್ಮ ಬೈದರ್ಕಳ ಗರಡಿ, ಕೈಪಂಗಳ ಬಾರಿಕೆ ಇದರ 44ನೇ ವರ್ಷದ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ ಫೆ.12 ಮತ್ತು 13ರಂದು ನಡೆಯಲಿದೆ.


ಫೆ.12ರಂದು ಬೆಳಿಗ್ಗೆ ಗಂಟೆ 8-00ರಿಂದ ಗಣಹೋಮ, ನಾಗತಂಬಿಲ ಮತ್ತು ದೈವಗಳ ತಂಬಿಲ ನಡೆಯಲಿದೆ. ಮದ್ಯಾಹ್ನ ಗಂಟೆ 12-00ಕ್ಕೆ ಸತ್ಯನಾರಾಯಣ ಪೂಜೆ ನಡೆಯಲಿದ್ದು ಮದ್ಯಾಹ್ನ ಗಂಟೆ 1-00ಕ್ಕೆ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 5-00ಕ್ಕೆ ಕಲ್ಲುರ್ಟಿ ದೈವದ ಭಂಡಾರ ತೆಗೆಯುವುದು, ಸಂಜೆ ಗಂಟೆ 6-00ರಿಂದ ಕಲ್ಲುರ್ಟಿ ನೇಮ, ರಾತ್ರಿ ಗಂಟೆ 8-30ರಿಂದ ಭಂಡಾರ ತೆಗೆದು ಉಳ್ಳಾಕುಲು-ಕೊಡಮಣಿತ್ತಾಯ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.

ಫೆ.13ರಂದು ರಾತ್ರಿ ಗಂಟೆ ೯-೦೦ರ ನಂತರ ಬೈದರ್ಕಳ ಗರಡಿ ಇಳಿಯುವುದು, ರಾತ್ರಿ ಗಂಟೆ ೧೦-೦೦ಕ್ಕೆ ಸಿಡಿಮದ್ದು ಪ್ರದರ್ಶನ, ಬೈದರ್ಕಳ ಗರಡಿ ಇಳಿದ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದ್ದು ರಾತ್ರಿ ಗಂಟೆ ೨-೦೦ಕ್ಕೆ ಮಾಣಿಬಾಳೆ ಗರಡಿ ಇಳಿಯುವುದು ನಡೆಯಲಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸುವಂತೆ ನೇಮೋತ್ಸವ ಸಮಿತಿಯ ಅಧ್ಯಕ್ಷ ವೇದನಾಥ ಸುವರ್ಣ ನರಿಮೊಗರು ಮತ್ತು ಪದಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here