ಒಳ್ಳೆಯ ಆರೋಗ್ಯಕ್ಕೆ ಯೋಗವೇ ಮದ್ದು: ಅಶೋಕ್ ಮುಂಡೂರು.
ಪುತ್ತೂರು: ದರ್ಬೆತ್ತಡ್ಕ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರದ ಐದನೇ ದಿನದ ಸಭಾ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಅಶೋಕ್ ಎ ಮುಂಡೂರು ಶಿಕ್ಷಕರು, ಎಸ್ ಪಿ ವೈ ಎಸ್ ಎಸ್ ಪಾಲ್ತಡಿ ಇವರು ಆತ್ಮ ಮತ್ತು ಪರಮಾತ್ಮನೊಂದಿಗೆ ಸಂಪರ್ಕಗೊಳಿಸುವ ಕ್ರಿಯೆ ಮಾನಸಿಕವಾಗಿ, ಸಾಮಾಜಿಕವಾಗಿ, ಆರೋಗ್ಯವಾಗಿ ಇರುವುದೇ ನಿಜವಾದ ಆರೋಗ್ಯ .ಉಸಿರು ,ದೇಹ, ಮನಸ್ಸನ್ನು ಒಂದು ಗಳಿಸುವ ಯೋಗ ಎಂದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರು ಡಾ. ನಿರೀಕ್ಷಣ್ ಸಿಂಗ್ ಗೌಗಿ ಎಸ್ .ಕೆ ಇವರು ಎನ್ಎಸ್ಎಸ್ ನಲ್ಲಿ ಕಲಿಯುವ ಪಾಠ ಜೀವನದುದ್ದಕ್ಕೂ ಮೌಲ್ಯಯುತ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸುಧಾಕರ ರೈ ಎಸ್ ಎಂ ಸೇರ್ತಾಜೆ ಎನ್ಎಸ್ಎಸ್ ಎಂಬುವುದು ಸೇವಾ ಮನೋಭಾವ ಹಾಗೂ ಸಹಬಾಳ್ವೆಯ ಪ್ರತೀಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತ ಹಿರಿಯ ಪ್ರಾಥಮಿಕ ಶಾಲೆ ದರ್ಬೆತಡ್ಕ ಇಲ್ಲಿನ ಎಸ್ ಡಿ ಎಂ ಸಿ ಸದಸ್ಯರಾದ .ತಿಮ್ಮಪ್ಪ , ಯೋಜನಾಧಿಕಾರಿಗಳು ಹಾಗೂ ಸ್ವಯಂಸೇವಕರುಗಳು ಉಪಸ್ಥಿತರಿದ್ದರು.ಸ್ವಯಂ ಸೇವಕಿ ಅಮೃತ ಕಾರ್ಯಕ್ರಮ ನಿರೂಪಿಸಿದರು.ಊರಿನ ಜನರು ಹಾಗೂ ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಮನರಂಜನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.