ಸವಣೂರು : ಸವಣೂರು ಗ್ರಾಮದ ಆರೇಲ್ತಡಿ ಕೆಡೆಂಜಿಯಲ್ಲಿ ಶ್ರೀ ಕೊರಗಜ್ಜ ದೈವದ ನೇಮೋತ್ಸವವು ಫೆ.15ರಂದು ನಡೆಯಲಿದೆ.
ಫೆ.15ರಂದು ಬೆಳಿಗ್ಗೆ ಗಣಹೋಮ ,ಸಂಜೆ 6ರಿಂದ ಮುಗೇರು ಶ್ರೀ ಮಹಾವಿಷ್ಣು ಭಜನಾ ಮಂಡಳಿ ವತಿಯಿಂದ ಕುಣಿತ ಭಜನೆ ಮತ್ತು ಭಜನಾ ಕಾರ್ಯಕ್ರಮ ,ರಾತ್ರಿ 8 ರಿಂದ ಶ್ರೀ ಕೊರಗಜ್ಜ ದೈವದ ನೇಮೋತ್ಸವ ನಡೆಯಲಿದೆ.
ದೈವಕ್ಕೆ ಸೀಯಾಳ,ಹಿಂಗಾರ ಇನ್ನಿತರ ವಸ್ತುಗಳನ್ನು ಭಕ್ತಾದಿಗಳು ನೀಡಬಹುದು.ಅಗೇಲು ಸೇವೆ ಮಾಡಿಸುವವರು ಮುಂಚಿತವಾಗಿ 8105900072 ಸಂಪರ್ಕಿಸಬಹುದು ಎಂದು ನಿಶಾಂತ್ ಕೆಡೆಂಜಿ ಅವರು ತಿಳಿಸಿದ್ದಾರೆ.