ಪುತ್ತೂರು: ಕೇಂದ್ರ ಸರಕಾರದ ರಾಜ್ಯ ಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ ವಿರುದ್ಧ ಪುತ್ತೂರು ವಿಧಾನ ಸಭಾ ಕ್ಷೇತ್ರದ ಎಸ್ಡಿಪಿಐ ವತಿಯಿಂದ ಪುತ್ತೂರು ಗಾಂಧಿಕಟ್ಟೆಯ ಬಳಿ ಫೆ.13 ರ ರಾತ್ರಿ ಪ್ರತಿಭಟನೆ ನಡೆಯಿತು. ಪ್ರತಿ ಭಟನೆಯಲ್ಲಿ ವಕ್ಫ್ ಮಸೂದೆಯ ಪ್ರತಿಗಳನ್ನು ಹರಿದು ಬೆಂಕಿ ಹಚ್ಚಿ ಪ್ರತಿಭಟಿಸಲಾಯಿತು.
ಎಸ್ಡಿಪಿಐ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ ಅವರು ಮಾತನಾಡಿ “ಬಿಜೆಪಿ ಮತ್ತು ಎನ್ಡಿಎ ಮಂಡಿಸಿದ ತಿದ್ದುಪಡಿಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿವೆ. ನರೇಂದ್ರ ಮೋದಿಯವರು ಪ್ರಧಾನಿಯಾಗಿದ್ದಿನಿಂದ ಮುಸಲ್ಮಾನರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯ ಪ್ರತಿಗಳನ್ನು ಬೆಂಕಿ ಹಚ್ಚಿ ಸುಡಲಾಯಿತು. ಈ ಸಂದರ್ಭ ಎಸ್ಡಿಪಿಐ ಕ್ಷೇತ್ರೀಯ ಸಮಿತಿ ಅಧ್ಯಕ್ಷ ಆಶ್ರಫ್ ಬಾವು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬೂಬಕರ್ ಸಿದ್ದಿಕ್, ಜಿಲ್ಲಾ ಕಾರ್ಯದರ್ಶಿ ಶಾಕೀರ್ ಅಳಕೆಮಜಲು. ಕ್ಷೇತ್ರ ಸಮಿತಿ ಉಪಾಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ವಿಶ್ವನಾಥ್ ಪುಣ್ಚತ್ತಾರು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಎಸ್ಡಿಪಿಐ ಜೊತೆ ಕಾರ್ಯದರ್ಶಿ ರಹೀಮ್ ಪುತ್ತೂರು ಸ್ವಾಗತಿಸಿದರು. ಉಸ್ಮಾನ್ ಎ ಕೆ ವಂದಿಸಿದ್ದರು.