ಕೆದಂಬಾಡಿ ಇದ್ಪಾಡಿ ಶ್ರೀ ಶಿರಾಡಿ ಭಕ್ತವೃಂದದಿಂದ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ

0

ಪುತ್ತೂರು: ಕೆದಂಬಾಡಿ ಗ್ರಾಮದ ಇದ್ಪಾಡಿ ಶ್ರೀ ಶಿರಾಡಿ ಭಕ್ತವೃಂದ ಇದರ ಪ್ರಾಯೋಜಕತ್ವದಲ್ಲಿ ಊರವರ ಸಹಕಾರದೊಂದಿಗೆ ಕೆದಂಬಾಡಿ ಗ್ರಾಮದ ಶ್ರೀ ಶಿರಾಡಿ ದೈವಸ್ಥಾನದ ಇದ್ಪಾಡಿ ಇದರ ವಾರ್ಷಿಕ ನೇಮೋತ್ಸವದ ಪ್ರಯುಕ್ತ ಫೆ.11 ರಂದು ಇದ್ಪಾಡಿ ಶ್ರೀ ಶಿರಾಡಿ ಭಕ್ತವೃಂದದ ವತಿಯಿಂದ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿ ಕಾರ್ಯಕ್ರಮಗಳು ಇದ್ಪಾಡಿ ಶ್ರೀ ಶಿರಾಡಿ ದೈವ ರಂಗಮಂಟಪದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಯಮಿ ಕುಂಬ್ರ ಮೋಹನದಾಸ ರೈಯವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಉತ್ಸಾಹಿ ಯುವಕರ ತಂಡವೊಂದು ಯಾವುದೇ ಫಲಾಪೇಕ್ಷೆ ಇಲ್ಲದೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳಿಗೆ ನಾವೆಲ್ಲರೂ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಹೇಳಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿದ್ದ ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು ಮಾತನಾಡಿ, ಶಿರಾಡಿ ಭಕ್ತವೃಂದ ನಮ್ಮ ಗ್ರಾಮದ ಯುವಕರ ತಂಡವಾಗಿದ್ದು ಹಳ್ಳಿ ಪ್ರದೇಶದಲ್ಲಿ ಒಂದು ಕಾರ್ಯಕ್ರಮ ಮಾಡುವಾಗ ನಾವೆಲ್ಲರೂ ಸಹಕಾರ ನೀಡಬೇಕಾಗಿರುವುದು ನಮ್ಮ ಧರ್ಮವಾಗಿದೆ ಎಂದು ಹೇಳಿ ಶುಭ ಹಾರೈಸಿದರು. ಬೆದ್ರುಮಾರು ಜೈಶಂಕರ ರೈಯವರು ಮಾತನಾಡಿ, ಗ್ರಾಮದಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳಲ್ಲಿ ಊರಿನವರ ಭಾಗವಹಿಸುವಿಕೆ ಅತೀ ಅಗತ್ಯ, ನಾವೆಲ್ಲರೂ ಸೇರಿಕೊಂಡಾಗಲೇ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ ಎಂದು ಹೇಳಿ ಶುಭ ಹಾರೈಸಿದರು. ಗುತ್ತಿಗೆದಾರರಾಗಿರುವ ಶರತ್ ಗೌಡ ಗುತ್ತು ಮಾತನಾಡಿ, ಯಾವುದೇ ಸಂಘಟನೆಗಳು ಸಮಾಜದಲ್ಲಿ ಇಂತಹ ಕಾರ್ಯಕ್ರಮಗಳು ಮಾಡಬೇಕಾದ ಅಗತ್ಯತೆ ಇದೆ. ಶಿರಾಡಿ ಭಕ್ತವೃಂದದ ಯುವಕರು ತಮ್ಮ ಶ್ರಮದಿಂದ ಈ ತಂಡವನ್ನು ಕಟ್ಟಿದ್ದಾರೆ ಮುಂದಕ್ಕೆ ಸಂಘಟನೆಯಿಂದ ಒಳ್ಳೆಯ ಕಾರ್ಯಕ್ರಮಗಳು ಮೂಡಿಬರಲಿ ಎಂದು ಶುಭ ಹಾರೈಸಿದರು.


ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಮೋಹನ್ ಪಾಟಾಳಿ ಕೋಡಿಯಡ್ಕ, ಕುಂಬ್ರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಮೋನಪ್ಪ ಪೂಜಾರಿ, ಮಾಜಿ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಜನಾರ್ದನ ರೈ ಪಡ್ಡಂಬೈಲು ಉಪಸ್ಥಿತರಿದ್ದರು. ಚಂದ್ರ ನಲಿಕೆ ಇದ್ಪಾಡಿ ಸ್ವಾಗತಿಸಿದರು. ಸುರೇಶ್ ಪೂಜಾರಿ ಇದ್ಪಾಡಿ ವಂದಿಸಿದರು. ಮೋಹನ್ ಆಳ್ವ ಮುಂಡಾಲಗುತ್ತು ಕಾರ್ಯಕ್ರಮ ನಿರೂಪಿಸಿದರು. ಭಕ್ತವೃಂದ ಪದಾಧಿಕಾರಿಗಳು ಸಹಕರಿಸಿದ್ದರು.


ಮನರಂಜಿಸಿದ ತುಳು ನಾಟಕ
ಭಕ್ತವೃಂದದ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ವಿಶೇಷವಾಗಿ ಬೃಂದಾವನ ನಾಟ್ಯಾಲಯ ಕುಂಬ್ರ ಇವರಿಂದ ನೃತ್ಯ ವೈಭವ ಹಾಗೇ ಬಂಗಾರ್ ಕಲಾವಿದೆರ್ ಪುತ್ತೂರು ಇವರಿಂದ ‘ಮನಸ್ ಎನ್ನಿಲೆಕ’ ಎಂಬ ತುಳು ನಾಟಕ ಪ್ರದರ್ಶನಗೊಂಡಿತು.

LEAVE A REPLY

Please enter your comment!
Please enter your name here